ಪ್ರವಾಹಪೀಡಿತ ಕೇರಳಕ್ಕೆ ಕತರ್ ನಿಂದ 35 ಕೋಟಿ ರೂ. ನೆರವು
Update: 2018-08-19 11:49 IST
ಹೊಸದಿಲ್ಲಿ, ಆ.19: ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಹಲವೆಡೆಗಳಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಕೇರಳಕ್ಕೆ ನೆರವಾಗಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ನಿನ್ನೆ ಯುಎಇ ಹೇಳಿದ ನಂತರ ಇದೀಗ ಕತರ್ 35 ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದೆ.
ಮೃತಪಟ್ಟಿರುವ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಕತರ್ ಪ್ರಧಾನಿ ಪ್ರಧಾನಮಂತ್ರಿ ಅಬ್ದುಲ್ಲಾ ಬಿನ್ ನಾಸರ್ ಬಿನ್ ಖಲೀಫಾ ಅಲ್ ಥಾನಿ, “ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ತಾನಿಯವರು ಪ್ರವಾಹಪೀಡಿತರಿಗೆ 35 ಕೋಟಿ ರೂ. ನೆರವು ನೀಡಲಿದ್ದಾರೆ” ಎಂದಿದ್ದಾರೆ.