ಕೆಸಿಎಫ್ ಒಮನ್: ಪ್ರಜಾ ಸಂಗಮ

Update: 2018-08-19 12:15 GMT

ಒಮನ್, ಆ. 19: ಪ್ರವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭವ್ಯ ಭಾರತದ 72 ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ 'ಭಾರತ ಭಾರತೀಯರದ್ದಾಗಲಿ' ಎಂಬ ಧ್ಯೇಯ ವಾಕ್ಯದಡಿಯಲ್ಲಿ ಪ್ರಜಾ ಸಂಗಮ ಕಾರ್ಯಕ್ರಮವು ಖಾನ ಖಝಾನ ಸಭಾಂಗಣ ಮಸ್ಕತ್ತಿನಲ್ಲಿ ನಡೆಯಿತು.

ಸಯ್ಯದ್ ಹಂಝ ತಂಙಳ್ ಅಲ್ ರಿಫಾಯಿ ದುಆದೊಂದಿಗೆ ಆರಂಭಗೊಂಡ  ಕಾರ್ಯಕ್ರಮದಲ್ಲಿ ಕೆಸಿಎಫ್ ಒಮನ್ ಅಧ್ಯಕ್ಷ ಸಯ್ಯದ್ ಆಬಿದ್  ಅಲ್ ಹೈದ್ರೋಸಿ ತಂಙಳ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಂಘ ಮಸ್ಕತ್ ಅಧ್ಯಕ್ಷ ಕರುಣಾಕರ ರಾವ್  ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕಲಂದರ್ ಭಾವ ಉಸ್ತಾದ್ ಪರಪ್ಪು ಅವರು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಹಾಗೂ ಸಮಾನತೆಯ ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಂಘ ಉಪಾಧ್ಯಕ್ಷ ರಮೇಶ್ ಕುಮಾರ್, ಮೋನಬ್ಬ ಹಾಜಿ, ಇಕ್ಬಾಲ್ ಬೊಲ್ಮಾರ್, ಝುಬೈರ್ ಸಅದಿ ಪಟ್ರಕೋಡಿ, ಅಬ್ಬಾಸ್ ಉಚ್ಚಿಲ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅವರನ್ನು ಕೆಸಿಎಫ್ ಒಮನ್ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಸಯ್ಯದ್ ಸೈಫುದ್ದೀನ್ ಅಲ್ ಹೈದ್ರೋಸಿ, ಸಯ್ಯದ್ ಸುಹೈಲ್ ಅಲ್ ಹೈದ್ರೋಸಿ, ಶಮೀರ್ ಉಸ್ತಾದ್ ಹೂಡೆ ,ಆರಿಫ್ ಕೋಡಿ, ಅಯ್ಯೂಬ್ ಕೋಡಿ, ಹಂಝ ಕನ್ನಂಗಾರ್, ಅಕ್ಬರ್ ಉಪಳ್ಳಿ , ಸಂಶುದ್ದೀನ್ ಪಾಲ್ತಡ್ಕ ಹಾಗೂ ಕೆಸಿಎಫ್ ಒಮನ್ ರಾಷ್ಟ್ರೀಯ ಮತ್ತು ಝೋನ್ ನಾಯಕರುಗಳು  ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನರಾದ ಭಾರತದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಇವರ ನಿಧನಕ್ಕೆ ಈ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸಾಧಿಕ್ ಕಾಟಿಪ್ಪಳ್ಳ ಹಾಗೂ ಅಶ್ರಫ್ ಕುತ್ತಾರ್ ದೇಶ ಭಕ್ತಿಗೀತೆಯನ್ನು ಹಾಡಿದರು. ಸಾಧಿಕ್ ಸುಳ್ಯ ಸ್ವಾಗತಿಸಿ, ಇಕ್ಬಾಲ್ ಎರ್ಮಾಳ್ ವಂದಿಸಿದರು.

ಸಿದ್ದೀಕ್ ಮಾಂಬ್ಳಿ ಸುಳ್ಯ  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News