20 ಲಕ್ಷ ಹಜ್ ಯಾತ್ರಿಗಳು ಅರಫಾತ್ ಬೆಟ್ಟದಲ್ಲಿ

Update: 2018-08-20 16:57 GMT

ಜಿದ್ದಾ, ಆ. 20: ಹಜ್‌ನ ಅತ್ಯಂತ ಮಹತ್ವದ ವಿಧಿಯನ್ನು ಪೂರೈಸುವುದಕ್ಕಾಗಿ ಸುಮಾರು 20 ಲಕ್ಷ ಯಾತ್ರಿಕರು ಸೋಮವಾರ ಸೂರ್ಯೋದಯದ ಬಳಿಕ ಅರಫಾತ್ ಬೆಟ್ಟವನ್ನು ಏರಲು ಆರಂಭಿಸಿದ್ದಾರೆ.

ದುಲ್ ಹಿಜ್ಜಾ ತಿಂಗಳ 9ನೇ ದಿನದಂದು ಸೂರ್ಯಾಸ್ತದವರೆಗೆ ಅರಫಾತ್ ಬೆಟ್ಟದಲ್ಲಿ ಕಳೆಯುವುದು ಹಜ್ ಯಾತ್ರೆಯ ಮುಖ್ಯ ವಿಧಿಯಾಗಿದೆ.

ಯಾತ್ರಿಕರು ಬೆಟ್ಟವನ್ನು ಏರಿದ ಬಳಿಕ, ದುಹರ್ ಮತ್ತು ಅಸರ್ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಸಲ್ಲಿಸುತ್ತಾರೆ.

ಅರಫಾತ್ ಬೆಟ್ಟದಲ್ಲಿ ನಿಂತ ಬಳಿಕ, ರಾತ್ರಿ ಕಳೆಯಲು ಯಾತ್ರಿಕರು ಮುಝ್ದಲಿಫಕ್ಕೆ ತೆರಳಲಿದ್ದಾರೆ.

ಮುಝ್ದಲಿಫದಲ್ಲಿ ‘ಜಮಾರತ್’ (ಸೈತಾನನಿಗೆ ಕಲ್ಲೆಸೆಯುವುದು) ವಿಧಿ ನಡೆಯಲಿದೆ.

ಈ ಬಾರಿಯ ಹಜ್ ಯಾತ್ರೆಗೆ ಸೌದಿ ಅಧಿಕಾರಿಗಳು ಗರಿಷ್ಠ ಸಿದ್ಧತೆಗಳನ್ನು ನಡೆಸಿದ್ದಾರೆ. ಯಾತ್ರಿಗಳ ಸುರಕ್ಷತೆಯನ್ನು ಖಾತರಿಪಡಿಸಲು ಹಾಗೂ ಹಜ್ ವಿಧಿಗಳನ್ನು ಸುಗಮವಾಗಿ ನಿರ್ವಹಿಸಲು ಪೂರಕ ಸನ್ನಿವೇಶ ನಿರ್ಮಿಸಲು ಅಧಿಕಾರಿಗಳು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News