ಕತರ್ ಪ್ರಜೆಗಳಿಗೆ ನೂತನ ವೀಸಾ ಇಲ್ಲ: ಬಹರೈನ್

Update: 2018-08-23 18:04 GMT

ದುಬೈ, ಆ. 23: ಕತರ್ ರಾಷ್ಟ್ರೀಯರಿಗೆ ನೂತನ ವೀಸಾಗಳನ್ನು ನೀಡುವುದನ್ನು ನಿಲ್ಲಿಸುವುದಾಗಿ ಬಹರೈನ್‌ನ ಆಂತರಿಕ ಸಚಿವಾಲಯ ಮಂಗಳವಾರ ಹೇಳಿದೆ.

ಬಹರೈನ್‌ನಲ್ಲಿ ಕಲಿಯುತ್ತಿರುವ ಕತರ್ ವಿದ್ಯಾರ್ಥಿಗಳು ಹಾಗೂ ಈಗಾಗಲೇ ವೀಸಾ ಹೊಂದಿರುವ ಇತರ ಕತರ್ ಪ್ರಜೆಗಳಿಗೆ ನೂತನ ನಿಯಮ ಅನ್ವಯಿಸುವುದಿಲ್ಲ ಎಂದು ಸರಕಾರಿ ಸುದ್ದಿ ಸಂಸ್ಥೆ ಬಿಎನ್‌ಎಯಲ್ಲಿ ಪ್ರಕಟವಾದ ಹೇಳಿಕೆಯೊಂದು ತಿಳಿಸಿದೆ.

ಕತರ್ ಅಧಿಕಾರಿಗಳ ‘ಪ್ರತಿಕೂಲಾತ್ಮಕ ಕೃತ್ಯ’ಗಳಿಗೆ ಪ್ರತಿಯಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಬಹರೈನ್, ಸೌದಿ ಅರೇಬಿಯ, ಯುಎಇ ಮತ್ತು ಈಜಿಪ್ಟ್‌ಗಳು 2017ರ ಜೂನ್‌ನಲ್ಲಿ ಕತರ್ ವಿರುದ್ಧದ ರಾಜತಾಂತ್ರಿಕ, ಸಾರಿಗೆ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News