ಸಾಂಕ್ರಾಮಿಕ ರೋಗ ಮುಕ್ತ ಹಜ್: ಸೌದಿ ಆರೋಗ್ಯ ಸಚಿವ

Update: 2018-08-24 17:46 GMT

ಜಿದ್ದಾ, ಆ. 24: ಹಾಲಿ ಹಜ್ ಋತು ಸಾಂಕ್ರಾಮಿಕ ರೋಗ ಮುಕ್ತವಾಗಿತ್ತು ಎಂದು ಸೌದಿ ಅರೇಬಿಯದ ಆರೋಗ್ಯ ಸಚಿವ ಡಾ. ತೌಫೀಕ್ ಅಲ್-ರಬಿಅ ಹೇಳಿದ್ದಾರೆ.

ಯಾತ್ರಿಕರ ಆರೋಗ್ಯ ತಪಾಸಣೆ ಮತ್ತು ಲಸಿಕೆ ನೀಡಲು ಬೃಹತ್ ಪ್ರಮಾಣದ ಕಾರ್ಯಕ್ರಮವೊಂದನ್ನು ರೂಪಿಸಲಾಗಿತ್ತು.

ಪ್ರವೇಶ ದ್ವಾರಗಳಲ್ಲಿ 16 ಲಕ್ಷ ಯಾತ್ರಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು ಎಂದು ಅವರು ತಿಳಿಸಿದರು.

ಇದಕ್ಕೆ ಹೊರತಾಗಿ, 3.60 ಲಕ್ಷ ಸೌದಿ ಯಾತ್ರಿಕರಿಗೆ ಪೋಲಿಯೊ ನಿಗ್ರಹ ಲಸಿಕೆ ಹಾಗೂ 4.80 ಲಕ್ಷ ಮಂದಿಗೆ ಸಾಮಾನ್ಯ ಹಾಗೂ ಮೆದುಳು ಜ್ವರದ ಲಸಿಕೆಗಳನ್ನು ನೀಡಲಾಗಿದೆ.

ಒಟ್ಟು 5,000 ಹಾಸಿಗೆಗಳನ್ನೊಳಗೊಂಡ 25 ಆಸ್ಪತ್ರೆಗಳ ಮೂಲಕ ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ನೀಡಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.

ಇವುಗಳಿಗೆ ಹೆಚ್ಚುವರಿಯಾಗಿ 155 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 180 ಆ್ಯಂಬುಲೆನ್ಸ್‌ಗಳು, ಚಲಿಸುವ ಕ್ಲಿನಿಕ್‌ಗಳು ಮತ್ತು ಬಯಲು ಆಸ್ಪತ್ರೆಗಳನ್ನು ಯಾತ್ರಿಗಳ ಸೇವೆಗಾಗಿ ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News