ನಕಲಿ ನೇಮಕಾತಿ ವೆಬ್‌ಸೈಟ್‌ಗಳ ಬಗ್ಗೆ ಜಾಗೃತರಾಗಿರಿ

Update: 2018-08-26 17:38 GMT

ಅಬುದಾಭಿ, ಆ.26: ಯುಎಇಯಲ್ಲಿ ಉದ್ಯೋಗಗಳನ್ನು ಬಯಸುತ್ತಿರುವವರು, ನಕಲಿ ನೇಮಕಾತಿ ವೆಬ್‌ಸೈಟ್‌ಗಳ ಬಗ್ಗೆ ಕಟ್ಟೆಚ್ಚರದಿಂದಿರಬೇಕು ಹಾಗೂ ಅವುಗಳೊಂದಿಗೆ ವ್ಯವಹರಿಸಕೂಡದೆಂದು ಅಬುಧಾಬಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  ಅಬುಧಾಬಿ ಪೊಲೀಸರು ತಮ್ಮ ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಈ ಕುರಿತು ಹೇಳಿಕೆಯೊಂದನ್ನು ಪ್ರಕಟಿಸಿದ್ದು,ನಕಲಿ ವೆಬ್‌ಸೈಟ್‌ಗಳ ಮೂಲಕ ಬೋಗಸ್ ಕಂಪೆನಿಗಳನ್ನು ಹುಟ್ಟುಹಾಕುವ ವ್ಯಕ್ತಿಗಳ ಬಗ್ಗೆ ಜಾಗೃತೆಯಿಂದಿರುವಂತೆ ಉದ್ಯೋಗಾಕಾಂಕ್ಷಿಗಳಿಗೆ ತಿಳಿಸಿದ್ದಾರೆ. ಕೆಲವೊಮ್ಮೆ ಇಂತಹ ವ್ಯಕ್ತಿಗಳು, ಅಮಾಯಕರನ್ನ್ನು ಮರುಳು ಮಾಡಲು ಹೆಸರಾಂತ ಸಂಸ್ಥೆಗಳ ಹೆಸರುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ಉದ್ಯೋಗಾವಕಾಶ ನೀಡುವ ಅಮಿಷವೊಡ್ಡಿ ಉದ್ಯೋಗಾಂಕ್ಷಿಗಳಿಂದ ಹಣವನ್ನು ತಮಗೆ ವರ್ಗಾಯಿಸುವಂತೆ ಮಾಡುತ್ತಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಉದ್ಯೋಗಾಕಾಂಕ್ಷಿಗಳು ಅತ್ಯಂತ ಜಾಗರೂಕತೆಯಿಂದ ವರ್ತಿಸಬೇಕಾಗಿದೆ ಹಾಗೂ ಆನ್‌ಲೈನ್ ವಂಚನೆಯಲ್ಲಿ ಶಾಮೀಲಾಗಿರುವ ನಕಲಿ ನೇಮಕಾತಿ ವೆಬ್‌ಸೈಟ್‌ಗಳಿಂದ ದೂರವಿರಬೇಕೆಂದು ಅಬುದಾಬಿ ಪೊಲೀಸ್ ಇಲಾಖೆಯ ಸುರಕ್ಷಾ ಮಾಹಿತಿ ವಿಭಾಗ (ಕಮಾಂಡ್ ಅಫೇರ್ಸ್‌)ದ ನಿರ್ದೇಶಕ ಮುಹಮ್ಮದ್ ಅಲ್ ಕಾಬಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News