70 ಶೇ. ವಿದೇಶಿಯರು ಅರ್ಹತೆ ಹೊಂದಿಲ್ಲ: ಕುವೈತ್ ಸಚಿವೆ

Update: 2018-08-27 17:24 GMT

ದುಬೈ, ಆ. 27: ಕುವೈತ್‌ನ ಖಾಸಗಿ ಕ್ಷೇತ್ರದಲ್ಲಿರುವ ವಿದೇಶ ಕೆಲಸಗಾರರ ಪೈಕಿ 70 ಶೇಕಡ ಮಂದಿ ಸೂಕ್ತ ಅರ್ಹತೆ ಹೊಂದಿಲ್ಲ ಎಂದು ದೇಶದ ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಮಿಕ ಸಚಿವೆ ಹಿಂದ್ ಅಲ್-ಸಬೀಹ್ ರವಿವಾರ ಹೇಳಿದ್ದಾರೆ ಎಂದು ಸ್ಥಳೀಯ ಪತ್ರಿಕೆ ‘ಕುವೈತ್ ಟೈಮ್ಸ್’ ವರದಿ ಮಾಡಿದೆ.

 ಈ ಕೆಲಸಗಾರರು ಪಿಯುಸಿ ಅಥವಾ ವಿಶ್ವವಿದ್ಯಾನಿಲಯ ಪದವಿಗಳನ್ನು ಹೊಂದಿಲ್ಲ ಹಾಗೂ ಅವರನ್ನು ಅರ್ಹತೆ ಸಮೀಕ್ಷಾ ವಿಧಾನಗಳಿಗೆ ಗುರಿಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈದುಲ್ ಅಝ್‌ಹಾ ರಜೆಯ ಸಂದರ್ಭದಲ್ಲಿ ಕುವೈತ್‌ನ ಸಾರ್ವಜನಿಕ ಸಿಬ್ಬಂದಿ ಪ್ರಾಧಿಕಾರ ನಡೆಸಿದ ತಪಾಸಣೆಗಳ ವೇಳೆ ಈ ಅಂಶ ಬಯಲಾಗಿದೆ. ಈ ಅವಧಿಯಲ್ಲಿ ಅದು ಭಾರೀ ಪ್ರಮಾಣದ ಉಲ್ಲಂಘನೆಗಳನ್ನು ಪತ್ತೆಹಚ್ಚಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News