ದುಬೈ: 11,000 ಟ್ಯಾಕ್ಸಿಗಳಿಗೆ ಕ್ಯಾಮರ

Update: 2018-08-28 17:52 GMT

ದುಬೈ, ಆ. 28: ದುಬೈಯಲ್ಲಿರುವ ಎಲ್ಲ ಟ್ಯಾಕ್ಸಿಗಳು ಅಕ್ಟೋಬರ್ ವೇಳೆಗೆ ನಿಗಾ ಕ್ಯಾಮರಗಳನ್ನು ಹೊಂದಿರುತ್ತವೆ ಎಂದು ನಗರದ ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ ಹೇಳಿದೆ.

ದುಬೈಯಲ್ಲಿ 11,000ಕ್ಕೂ ಅಧಿಕ ಟ್ಯಾಕ್ಸಿಗಳು ಓಡಾಡುತ್ತಿವೆ ಹಾಗೂ ಸುರಕ್ಷಾ ಕ್ರಮವಾಗಿ ಸುಮಾರು 9,000 ಟ್ಯಾಕ್ಸಿಗಳಲ್ಲಿ ಕ್ಯಾಮರಗಳನ್ನು ಅಳವಡಿಸಲಾಗಿದೆ.

ಮುದ್ರಿಕೆಗಳು ಟ್ಯಾಕ್ಸಿಯಲ್ಲಿರುವ ಡಿವಿಆರ್‌ನಲ್ಲಿ ಸಂಗ್ರಹವಾಗುತ್ತದೆ. ಕ್ಯಾಮರಗಳ ದೃಶ್ಯಗಳನ್ನು ಅದು ನಡೆಯುವ ಸಮಯದಲ್ಲೇ ನೋಡಲು ಶೀಘ್ರದಲ್ಲೇ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News