ದುಬೈ: ಕೊಡಗು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟ

Update: 2018-08-30 18:08 GMT

ದುಬೈ, ಆ. 30: ಕೊಡಗಿನಲ್ಲಿ ಪ್ರವಾಹದಿಂದ ಮತ್ತು ಬೆಟ್ಟ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡುವ ಒಂದು ಭಾಗವಾಗಿ 'ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ದುಬೈ' ವತಿಯಿಂದ 'ಗೇಮ್ ಫಾರ್ ಕೊಡಗು ಫ್ಲಡ್ ಚಾರಿಟಿ' ಎಂಬ ಶೀರ್ಷಿಕೆಯೊಂದಿಗೆ ಬಕ್ರೀದ್ ಹಬ್ಬದ ಪ್ರಯುಕ್ತವಾಗಿ ಕೊಡಗು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ.

ಡಿ. 31ರಂದು ರಾತ್ರಿ 1 ಗಂಟೆಯಿಂದ ಕಿಸಸ್ ಸ್ಟೇಡಿಯಂ ಮೆಟ್ರೋ ಬಳಿ ಇರುವ ಫುಟ್ಬಾಲ್ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ. 

ಈ ಪಂದ್ಯದಲ್ಲಿ ವಿನ್ನರ್ಸ್ ಮತ್ತು ರನ್ನರ್ಸ್ ಪಟ್ಟ ಪಡೆದುಕೊಳ್ಳುವ ತಂಡಗಳು ತಮ್ಮ ನಗದು ಬಹುಮಾನವನ್ನು ಕೊಡಗಿನ ಸಂತ್ರಸ್ತರಿಗೆ ತಮ್ಮ ಕಿರುಕಾಣಿಕೆ ಎಂಬ ರೀತಿಯಲ್ಲಿ ಚಾರಿಟಿಗೆ ನೀಡಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News