ಸೌದಿ ಯುವರಾಜ ಸಲ್ಮಾನ್, ಅಬುಧಾಬಿಯ ಝಾಯಿದ್ ವಿರುದ್ಧ ಐಸಿಸಿಯಲ್ಲಿ ಮೊಕದ್ದಮೆ

Update: 2018-09-04 16:00 GMT

ಸನಾ (ಯಮನ್), ಸೆ. 4: ಯಮನ್‌ನಲ್ಲಿ ನಡೆಯುತ್ತಿರುವ ಯುದ್ಧಾಪರಾಧಗಳಿಗೆ ಸಂಬಂಧಿಸಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಅಬುಧಾಬಿ ಯುವರಾಜ ಮುಹಮ್ಮದ್ ಬಿನ್ ಝಾಯಿದ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ದಲ್ಲಿ ಮೊಕದ್ದಮೆ ಹೂಡುವುದಾಗಿ ಯಮನ್‌ನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಾನವಹಕ್ಕುಗಳ ಕಾರ್ಯಕರ್ತೆ ತವಕ್ಕಲ್ ಕರ್ಮನ್ ಹೇಳಿದ್ದಾರೆ.

ಯಮನ್‌ನಲ್ಲಿ ನಡೆಯುತ್ತಿರುವ ಯುದ್ಧಾಪರಾಧಗಳ ಬಗ್ಗೆ ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯ ಆಧಾರದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದಿದ್ದಾರೆ.

ಯಮನ್‌ನಲ್ಲಿ ಯುದ್ಧಾಪರಾಧಗಳಿಗೆ ಸಮವಾಗಿರುವ ಕೃತ್ಯಗಳನ್ನು ಯಮನ್ ಸರಕಾರ, ಸೌದಿ ಅರೇಬಿಯ ಮತ್ತು ಯುಎಇಯನ್ನೊಳಗೊಂಡ ಅರಬ್ ಮಿತ್ರಕೂಟ ಪಡೆಗಳು ಹಾಗೂ ಹೌದಿ ಬಂಡುಕೋರರು ಮಾಡುತ್ತಿದ್ದಾರೆ ಎಂದು ಕಳೆದ ವಾರ ಬಿಡುಗಡೆಗೊಂಡ ವಿಶ್ವಸಂಸ್ಥೆಯ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News