ತಾಯ್ನಾಡಿಗೆ ಹಣ ಕಳುಹಿಸಲು ಸೌದಿಯಲ್ಲಿರುವ ವಿದೇಶಿಗರು ಶುಲ್ಕ ಪಾವತಿಸಬೇಕೆ?

Update: 2018-09-04 15:57 GMT

ಜಿದ್ದಾ, ಸೆ. 4: ವಿದೇಶಿ ಉದ್ಯೋಗಿಗಳು ತಮ್ಮ ತಾಯ್ನಾಡಿಗೆ ಕಳುಹಿಸುವ ಹಣಕ್ಕೆ ಶುಲ್ಕ ವಿಧಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂಬ ವರದಿಗಳನ್ನು ಸೌದಿ ಅರೇಬಿಯದ ಹಣಕಾಸು ಸಚಿವಾಲಯ ಸೋಮವಾರ ನಿರಾಕರಿಸಿದೆ.

ಅಂತಾರಾಷ್ಟ್ರೀಯ ಮಾದರಿಗಳು ಮತ್ತು ನಿಯಮಗಳ ಅನುಸಾರ ಅಧಿಕೃತ ಮಾಧ್ಯಮದ ಮೂಲಕ ಹಣದ ಮುಕ್ತ ಸಂಚಾರಕ್ಕೆ ತಾನು ಬದ್ಧವಾಗಿರುವುದಾಗಿ ಸಚಿವಾಲಯ ತಿಳಿಸಿದೆ.

ಕೆಲವು ಮಾಧ್ಯಮ ಗುಂಪುಗಳ ‘ಆಧಾರರಹಿತ ವರದಿಗಳಿಗೆ’ ಈ ಪ್ರತಿಕ್ರಿಯೆ ನೀಡುತ್ತಿರುವುದಾಗಿ ಅದು ಹೇಳಿದೆ.

2017ರಲ್ಲಿ ಸೌದಿ ಅರೇಬಿಯದಲ್ಲಿ ಒಂದು ಕೋಟಿಗೂ ಅಧಿಕ ವಿದೇಶಿ ಉದ್ಯೋಗಿಗಳು ಕೆಲಸ ಮಾಡಿದ್ದಾರೆ. ಅವರು ಸುಮಾರು 38 ಬಿಲಿಯ ಡಾಲರ್ (ಸುಮಾರು 2.72 ಲಕ್ಷ ಕೋಟಿ ರೂಪಾಯಿ) ಮೊತ್ತವನ್ನು ತಮ್ಮ ದೇಶಗಳಿಗೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News