ಸೌದಿ: ಆನ್‌ಲೈನ್ ನಲ್ಲಿ ವ್ಯಂಗ್ಯ ಹರಡಿದರೆ 5 ವರ್ಷ ಜೈಲು

Update: 2018-09-05 17:37 GMT

ರಿಯಾದ್, ಸೆ. 5: ‘ಸಾರ್ವಜನಿಕ ವ್ಯವಸ್ಥೆಗೆ ಭಂಗ ತರುವ’ ಆನ್‌ಲೈನ್ ವ್ಯಂಗ್ಯ ಹರಡುವವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸೌದಿ ಅರೇಬಿಯದ ಪಬ್ಲಿಕ್ ಪ್ರಾಸಿಕ್ಯೂಟರ್ ಮಂಗಳವಾರ ಎಚ್ಚರಿಸಿದ್ದಾರೆ.

‘‘ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ವೌಲ್ಯಗಳು ಮತ್ತು ಸಾರ್ವಜನಿಕ ನೈತಿಕತೆಯನ್ನು ಅಪಹಾಸ್ಯಮಾಡುವ ಹಾಗೂ ಅವುಗಳ ಅಸ್ತಿತ್ವಕ್ಕೆ ಭಂಗ ತರುವ ಸಂದೇಶಗಳನ್ನು ಸೃಷ್ಟಿಸುವುದು ಹಾಗೂ ಸಾಮಾಜಿಕ ಮಾಧ್ಯಮದ ಮೂಲಕ ಹರಡುವುದನ್ನು ಸೈಬರ್ ಅಪರಾಧ ಎಂಬುದಾಗಿ ಪರಿಗಣಿಸಲಾಗುವುದು ಹಾಗೂ ಈ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಜೈಲುವಾಸದ ಶಿಕ್ಷೆ ಹಾಗೂ 30 ಲಕ್ಷ ರಿಯಾಲ್ (ಸುಮಾರು 5.73 ಕೋಟಿ ರೂಪಾಯಿ) ದಂಡ ವಿಧಿಸಲಾಗುವುದು’’ ಎಂದು ಪಬ್ಲಿಕ್ ಪ್ರಾಸಿಕ್ಯೂಶನ್ ಟ್ವೀಟ್ ಮಾಡಿದೆ.

2017 ಜೂನ್‌ನಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಸೌದಿ ಅರೇಬಿಯದ ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್, ಮಾನವಹಕ್ಕುಗಳ ಕಾರ್ಯಕರ್ತರು ಮತ್ತು ರಾಜಕೀಯ ಭಿನ್ನಮತೀಯರನ್ನು ಹತ್ತಿಕ್ಕುತ್ತಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News