ಉದ್ಯೋಗದಾತರ ಪರವಾನಿಗೆ ಇಲ್ಲದೆಯೇ ವಿದೇಶಿಯರು ದೇಶ ತೊರೆಯಬಹುದು: ಕತರ್‌ನಲ್ಲಿ ಮಹತ್ವದ ಕಾರ್ಮಿಕ ತಿದ್ದುಪಡಿ

Update: 2018-09-05 17:41 GMT

ದೋಹಾ (ಕತರ್), ಸೆ. 5: ಉದ್ಯೋಗದಾತರು ನೀಡುವ ‘ನಿರ್ಗಮನ ಪರವಾನಿಗೆ’ ಇಲ್ಲದೆಯೇ ದೇಶದಿಂದ ಹೊರಹೋಗಲು ಕಾರ್ಮಿಕರಿಗೆ ಅವಕಾಶ ನೀಡಲು ಕತರ್ ಮುಂದಾಗಿದೆ.

ಅದು ಈ ಸಂಬಂಧ ವಾಸ್ತವ್ಯ ಕಾನೂನುಗಳಿಗೆ ತಿದ್ದುಪಡಿ ತಂದಿದೆ.

‘ನಿರ್ಗಮನ ಪರವಾನಿಗೆ’ (ಎಕ್ಸಿಟ್ ಪರ್ಮಿಟ್)ಗಳಿಲ್ಲದೆ ದೇಶದಿಂದ ಹೊರಹೋಗಲು ಅವಕಾಶ ನಿರಾಕರಿಸುವ ಕಾನೂನನ್ನು ರದ್ದುಗೊಳಿಸಬೇಕು ಎಂಬುದಾಗಿ ಕಾರ್ಮಿಕ ಹಕ್ಕುಗಳ ಸಂಘಟನೆಗಳು ತುಂಬಾ ಸಮಯದಿಂದ ಒತ್ತಾಯಿಸುತ್ತಿವೆ.

2022ರ ಫುಟ್ಬಾಲ್ ವಿಶ್ವಕಪ್ ಸಮೀಪಿಸುತ್ತಿರುವಂತೆಯೇ, ಕಾರ್ಮಿಕರ ಶೋಷಣೆಗೆ ಸಂಬಂಧಿಸಿದ ಆರೋಪಗಳನ್ನು ತಾನು ನಿಭಾಯಿಸುತ್ತಿದ್ದೇನೆ ಎಂಬ ಸೂಚನೆಯನ್ನು ಕತರ್ ನೀಡಿದೆ.

2022ರ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯವನ್ನು ಕತರ್ ವಹಿಸಿಕೊಳ್ಳಲಿದೆ.

ನೂತನ ಕಾನೂನಿನ ಪ್ರಕಾರ, ಹೆಚ್ಚಿನ ವಲಸಿಗ ಕಾರ್ಮಿಕರಿಗೆ ತಮ್ಮ ಉದ್ಯೋಗದಾತರಿಂದ ಅನುಮೋದನೆ ಪಡೆದುಕೊಳ್ಳದೆಯೇ ದೇಶದಿಂದ ಹೊರಗೆ ಹೋಗಲು ಸಾಧ್ಯವಾಗಲಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು ತನ್ನ ದೋಹಾ ಕಚೇರಿ ಮೂಲಕ ಹೊರಡಿಸಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News