ಸೌದಿ ಅರೇಬಿಯಕ್ಕೆ 400 ಬಾಂಬ್‌ಗಳ ಮಾರಾಟ ರದ್ದು ಪಡಿಸಿದ ಸ್ಪೇನ್

Update: 2018-09-05 17:49 GMT

ಮ್ಯಾಡ್ರಿಡ್ (ಸ್ಪೇನ್), ಸೆ. 5: 400 ಲೇಸರ್ ನಿರ್ದೇಶಿತ ಬಾಂಬ್‌ಗಳನ್ನು ಸೌದಿ ಅರೇಬಿಯಕ್ಕೆ ಮಾರಾಟ ಮಾಡುವ ಒಪ್ಪಂದವನ್ನು ಸ್ಪೇನ್ ರದ್ದುಗೊಳಿಸಿದೆ.

ಸೌದಿ ಅರೇಬಿಯವು ಈ ಬಾಂಬ್‌ಗಳನ್ನು ಯಮನ್‌ನಲ್ಲಿ ಹೌದಿ ಬಂಡುಕೋರರ ವಿರುದ್ಧದ ಕಾಳಗದಲ್ಲಿ ಬಳಸುವ ಭೀತಿಯಿಂದ ಸ್ಪೇನ್ ಈ ಕ್ರಮ ತೆಗೆದುಕೊಂಡಿದೆ.

ಸ್ಪೇನ್‌ನ ಹಿಂದಿನ ಕನ್ಸರ್ವೇಟಿವ್ ಸರಕಾರವು 2015ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ನೂತನ ಸೆಂಟರ್-ಲೆಫ್ಟ್ ಸರಕಾರವು ಸೌದಿ ಅರೇಬಿಯವು ಈಗಾಗಲೇ ಪಾವತಿಸಿರುವ 9.2 ಮಿಲಿಯ ಯುರೋ (ಸುಮಾರು 76 ಕೋಟಿ ರೂಪಾಯಿ) ಹಣವನ್ನು ಮರುಪಾವತಿಸಲು ನಿರ್ಧರಿಸಿದೆ ಎಂದು ‘ಕ್ಯಡೇನ ಎಸ್‌ಇಆರ್’ ರೇಡಿಯೊ ಮಂಗಳವಾರ ವರದಿ ಮಾಡಿದೆ.

ಯಮನ್‌ನಲ್ಲಿ ಸೌದಿ ಅರೇಬಿಯ ನೇತೃತ್ವದ ಮಿತ್ರಕೂಟ ನಡೆಸುತ್ತಿರುವ ದಾಳಿಗಳಲ್ಲಿ ನಾಗರಿಕರು ಮತ್ತು ಮಕ್ಕಳು ಭಾರೀ ಸಂಖ್ಯೆಯಲ್ಲಿ ಸಾಯುತ್ತಿರುವ ಬಗ್ಗೆ ಮಾನವಹಕ್ಕು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News