ರಾಷ್ಟ್ರೀಯ ದಿನಾಚರಣೆಯಂದು ಗಿನ್ನೆಸ್ ದಾಖಲೆ ನಿರ್ಮಿಸಲಿವೆ ಸೌದಿ

Update: 2018-09-16 18:03 GMT

ಜಿದ್ದಾ, ಸೆ.15: ಸೌದಿ ಅರೇಬಿಯವು ಸೆಪ್ಟೆಂಬರ್ 23ರಂದು ತನ್ನ 88ನೇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸಲಿದ್ದು,ಅಂದು ದೇಶದ 13 ಪ್ರಾಂತಗಳಲ್ಲಿನ ಒಟ್ಟು 58 ಸ್ಥಳಗಳಲ್ಲಿ ಏಕಕಾಲಕ್ಕೆ ಒಟ್ಟು 9 ಲಕ್ಷ ಸುಡುಮದ್ದುಗಳನ್ನು ಸಿಡಿಸುವ ಮೂಲಕ ಹೊಸ ಗಿನ್ನೆಸ್ ದಾಖಲೆಯನ್ನು ಸ್ಥಾಪಿಸಲು ಸಜ್ಜಾಗಿದೆ.

  ರಾಷ್ಟ್ರೀಯ ದಿನಾಚರಣೆಯಂದು ಸೌದಿಯ ರಾಷ್ಟ್ರಧ್ವಜದಲ್ಲಿರುವ ಹಸಿರಿನ ಹಿನ್ನೆಲೆಯ ಚಿತ್ತಾರವನ್ನು ಈ ಸುಡುಮದ್ದುಗಳು ಬಾನಂಗಳದಲ್ಲಿ ಮೂಡಿಸಲಿದೆ. ಇದರ ಮುಂಭಾಗದಲ್ಲಿ 300 ಡ್ರೋನ್ ವಿಮಾನಗಳು ಅಡ್ಡವಾಗಿರಿಸಿದ ಬಿಳಿಬಣ್ಣದ ಖಡ್ಗದ ಚಿತ್ರ ಹಾಗೂ ಮುಸ್ಲಿಂ ಮರ ಧಾರ್ಮಿಕ ಸಂದೇಶವಾದ ‘ಶಹದಾ’ದ ಪವಿತ್ರ ಪದಗಳನ್ನು ಲೇಸರ್ ಬಿಂಬದಲ್ಲಿ ಸೃಷ್ಟಿಸಲಿವೆ.

 ಈ ಸಲದ ರಾಷ್ಟ್ರೀಯ ದಿನದ ಆಚರಣೆಗಾಗಿ ಸೌದಿಯ ಸರಕಾರಿ ಇಲಾಖೆಗಳು ಹಾಗೂ ಸೇನಾಪಡೆಗಳ ಜೊತೆ ಕೈಜೋಡಿಸಿ, ಸಮಗ್ರವಾದ ಕಾರ್ಯಕ್ರಮವೊಂದನ್ನು ರೂಪಿಸಿವೆ. ಇದರ ಅಂಗವಾಗಿ ಸೌದಿ ಆರೇಬಿಯದ ಎಲ್ಲಾ ನಗರಗಳು, ಪ್ರಾಂತಗಳು ಹಾಗೂ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳು ಜರಗಲಿವೆ.

    ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ರಿಯಾದ್‌ನಲ್ಲಿ ರಾಷ್ಟ್ರೀಯ ಮನರಂಜನಾ ದಲ್ಲಿ ಕಾನಿರ್ವಲ್, ಜಿದ್ದಾದಲ್ಲಿ ಸ್ಕೈ ಆಫ್ ಡ್ರೀಮ್ಸ್ ಶೋ, ದಮ್ಮಾಮ್‌ನಲ್ಲಿ ಲೈಟ್ ಗಾರ್ಡನ್ ಇವೆಂಟ್, ಖೋಬರ್‌ನಲ್ಲಿ ವೈಮಾನಿಕ ಪ್ರದರ್ಶನ ನಡೆಸಲಾಗುವುದು. ಅಲ್-ಅಹ್ಸಾ ಮತ್ತಿತರ ನಗರಗಳಲ್ಲಿ ಬಿಸಿಗಾಳಿಯ ಬಲೂನ್‌ಗಳನ್ನು ನೂರಾರು ಸಂಖ್ಯೆಯಲ್ಲಿ ಬಾನೆತ್ತರಕ್ಕೆ ಹಾರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News