×
Ad

ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯ ಸೊತ್ತುಗಳು ಹರಾಜು

Update: 2018-09-17 22:41 IST

ರಿಯಾದ್, ಸೆ. 17: ಸಾಲದ ಸುಳಿಗೆ ಸಿಲುಕಿರುವ ರಿಯಲ್ ಎಸ್ಟೇಟ್ ಉದ್ಯಮಿ ಮಾನ್ ಅಲ್-ಸನಿಅ ಮತ್ತು ಅವರ ಕಂಪೆನಿಯ ಮಾಲೀಕತ್ವದಲ್ಲಿರುವ ಜಮೀನುಗಳನ್ನು ಸೌದಿ ಅರೇಬಿಯ ಮುಂದಿನ ತಿಂಗಳಿನಿಂದ ಹರಾಜು ಹಾಕಲಿದೆ.

ಸಾಲ ನೀಡಿದವರಿಗೆ ನೂರಾರು ಕೋಟಿ ರಿಯಾಲ್ ಮೊತ್ತವನ್ನು ಮರುಪಾವತಿಸುವುದಕ್ಕಾಗಿ ಸೌದಿ ಸರಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಮೂಲಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿವೆ.

‘ಫೋರ್ಬ್ಸ್’ ಪತ್ರಿಕೆಯು 2007ರಲ್ಲಿ ಸನಿಅರನ್ನು ಜಗತ್ತಿನ 100 ಅತ್ಯಂತ ಶ್ರೀಮಂತರ ಪೈಕಿ ಒಬ್ಬರು ಎಂಬುದಾಗಿ ಗುರುತಿಸಿತ್ತು. ಆದರೆ, 2009ರಲ್ಲಿ ಅವರ ಕಂಪೆನಿ ‘ಸಅದ್ ಗ್ರೂಪ್’ ಸಾಲ ಮರುಪಾವತಿಯನ್ನು ನಿಲ್ಲಿಸಿತು. ಸಾಲ ಮರುಪಾವತಿ ಮಾಡಲು ವಿಫಲವಾಗಿರುವುದಕ್ಕಾಗಿ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಈಸ್ಟರ್ನ್ ಪ್ರಾವಿನ್ಸ್ ರಿಯಾದ್ ಮತ್ತು ಜಿದ್ದಾಗಳಲ್ಲಿರುವ ಅವರ ಜಮೀನುಗಳು ಮತ್ತು ಕಟ್ಟಡಗಳನ್ನು 5 ತಿಂಗಳ ಅವಧಿಯಲ್ಲಿ ಹರಾಜು ಹಾಕಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News