×
Ad

ಯುಎಇ: ನಿವೃತ್ತ ಜೀವನಕ್ಕಾಗಿ ವಿದೇಶಿಯರಿಗೆ ವಿಶೇಷ ವೀಸಾ

Update: 2018-09-17 22:46 IST

ದುಬೈ, ಸೆ. 17: ವಿದೇಶಿಯರು ಯುಎಇಯಲ್ಲಿ ನಿವೃತ್ತರಾದ ಬಳಿಕ ಆ ದೇಶದಲ್ಲಿ ದೀರ್ಘಾವಧಿ ವಾಸ್ತವ್ಯ ಹೂಡಲು ಅವಕಾಶ ನೀಡುವ ಕಾನೂನಿಗೆ ಯುಎಇ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್-ಮಕ್ತೂಮ್ ರವಿವಾರ ತಿಳಿಸಿದರು.

ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಯುಎಇ ಸರಕಾರದ ಅಭಿಯಾನದ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ಘೋಷಿಸಿದೆ.

55 ವರ್ಷವನ್ನು ಮೀರಿದ ವಿದೇಶಿ ನಿವೃತ್ತರಿಗೆ ವಿಶೇಷ ವಾಸ್ತವ್ಯ ವೀಸಾದ ಅನುಕೂಲಗಳನ್ನು ಈ ಕಾನೂನು ಒದಗಿಸುತ್ತದೆ. ಐದು ವರ್ಷಗಳ ಅವಧಿಯ ವೀಸಾವನ್ನು ಆರಂಭದಲ್ಲಿ ನೀಡಲಾಗುತ್ತದಾದರೂ, ಬಳಿಕ ಅದನ್ನು ವಿಸ್ತರಿಸುವ ಅವಕಾಶವೂ ಇರುತ್ತದೆ.

ಕಾನೂನು 2019ರಲ್ಲಿ ಜಾರಿಗೆ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News