ಯುಎಇ, ಜೋರ್ಡಾನ್ ಮತ್ತು ಲೆಬನಾನ್‌ಗಳಲ್ಲಿಯ ನಿರಾಶ್ರಿತ ಮಕ್ಕಳ ಶಿಕ್ಷಣಕ್ಕಾಗಿ 197 ಕೋಟಿ ರೂ.

Update: 2018-09-17 17:19 GMT

ದುಬೈ, ಸೆ. 17: ಯುಎಇ, ಜೋರ್ಡಾನ್ ಮತ್ತು ಲೆಬನಾನ್‌ಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತ ಮಕ್ಕಳಿಗಾಗಿ 100 ಮಿಲಿಯ ದಿರ್ಹಮ್ (ಸುಮಾರು 197 ಕೋಟಿ ರೂಪಾಯಿ) ಶಿಕ್ಷಣ ನಿಧಿಯನ್ನು ಸೋಮವಾರ ಘೋಷಿಸಲಾಗಿದೆ.

ಯುದ್ಧ ಮತ್ತು ಪ್ರಕೋಪಗಳಿಂದ ಬಾಧಿತ ಮಕ್ಕಳ ಸಬಲೀಕರಣಕ್ಕಾಗಿ ‘ಅಬ್ದುಲ್ ಅಝೀಜ್ ಅಲ್ ಗರೈರ್ ನಿರಾಶ್ರಿತ ಶಿಕ್ಷಣ ನಿಧಿ’ಯನ್ನು ಸ್ಥಾಪಿಸಲಾಗಿದೆ.

ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದಕ್ಕಾಗಿ ಮೂರು ವರ್ಷಗಳ ಅವಧಿಯಲ್ಲಿ ಈ ನಿಧಿಯನ್ನು ಬಳಸಲಾಗುವುದು.

6,500 ನಿರಾಶ್ರಿತ ವಿದ್ಯಾರ್ಥಿಗಳು ಹೈಸ್ಕೂಲ್ ಶಿಕ್ಷಣ, ವೃತ್ತಿ ತರಬೇತಿ ಮತ್ತು ಕಾಲೇಜು ಶಿಕ್ಷಣ ಪಡೆಯಲು ಹಾಗೂ ನೈಪುಣ್ಯ ಗಳಿಸಿಕೊಳ್ಳಲು ಸಾಧ್ಯವಾಗುವಂತೆ ಈ ತಿಂಗಳಲ್ಲಿ 45 ಮಿಲಿಯ ದಿರ್ಹಮ್ (ಸುಮಾರು 89 ಕೋಟಿ ರೂಪಾಯಿ) ಮೊತ್ತವನ್ನು ಗಮನಾರ್ಹ ಶೈಕ್ಷಣಿಕ ಮತ್ತು ಮಾನವೀಯ ಸಂಘಟನೆಗಳಿಗೆ ಒದಗಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News