ಯುಎಇ: ವಾಹನಗಳಿಂದ ಕಸ ಎಸೆದರೆ 1000 ದಿರ್ಹಮ್ ದಂಡ

Update: 2018-09-17 17:24 GMT

ಅಬುಧಾಬಿ, ಸೆ. 17: ರಸ್ತೆಯಲಿ ಕಸ ಬಿಸಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಯುಎಇ ಸರಕಾರ ಮುಂದಾಗಿದೆ. ವಾಹನಗಳಿಂದ ಕಸ ಎಸೆಯುವವರ ಮೇಲೆ 1,000 ದಿರ್ಹಮ್ (19,722 ರೂಪಾಯಿ) ದಂಡವನ್ನು ವಿಧಿಸಲಾಗುವುದು ಎಂದು ಅಬುಧಾಬಿ ಪೊಲೀಸರು ಹೇಳಿದ್ದಾರೆ.

ಅದೂ ಅಲ್ಲದೆ, ಈ ಅಪರಾಧ ಮಾಡುವವರಿಗೆ 6 ಕಪ್ಪು ಅಂಕಗಳನ್ನು ನೀಡಲಾಗುವುದು. ಯುಎಇಯ ಫೆಡರಲ್ ಸಾರಿಗೆ ಕಾನೂನಿನ ಪ್ರಕಾರ, ರಸ್ತೆಯಲ್ಲಿ ತ್ಯಾಜ್ಯವನ್ನು ಎಸೆಯುವುದು ಅಪರಾಧವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News