×
Ad

ಅಬುಧಾಬಿ: ಪ್ರಯಾಣಿಕರನ್ನು ಅಕ್ರಮವಾಗಿ ಹತ್ತಿಸಿಕೊಂಡರೆ 3,000 ದಿರ್ಹಮ್ ದಂಡ

Update: 2018-09-18 21:37 IST

ಅಬುಧಾಬಿ, ಸೆ. 18: ಪ್ರಯಾಣಿಕರನ್ನು ಅಕ್ರಮವಾಗಿ ಹತ್ತಿಸಿಕೊಳ್ಳುವ ವಾಹನಗಳಿಗೆ 3,000 ದಿರ್ಹಮ್ (ಸುಮಾರು 59,500 ರೂಪಾಯಿ)ವರೆಗೆ ದಂಡ ವಿಧಿಸಲಾಗುವುದು, 24 ಸಾರಿಗೆ ಅಂಕಗಳನ್ನು ಕಡಿತಗೊಳಿಸಲಾಗುವುದು ಹಾಗೂ ಅಂಥ ವಾಹನಗಳನ್ನು 30 ದಿನಗಳವರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅಬುಧಾಬಿ ಪೊಲೀಸರು ಎಚ್ಚರಿಸಿದ್ದಾರೆ.

ಈ ವರ್ಷ, ಪ್ರಯಾಣಿಕರನ್ನು ಅಕ್ರಮವಾಗಿ ಸಾಗಿಸಿದ ಆರೋಪದಲ್ಲಿ 2,000ಕ್ಕೂ ಅಧಿಕ ಮಂದಿಯನ್ನು ಹಿಡಿಯಲಾಗಿದೆ. ಅದೇ ವೇಳೆ, ಖಾಸಗಿ ವಾಹನಗಳಲ್ಲಿ ಜನರನ್ನು ಅಕ್ರಮವಾಗಿ ಸಾಗಿಸುತ್ತಿದ್ದ 2,198 ಮಂದಿಯನ್ನು ಪತ್ತೆಹಚ್ಚಲಾಗಿದೆ.

 ಕೆಲವು ಚಾಲಕರು ಯುಎಇ ಅಧಿಕಾರಿಗಳು ನೀಡಿರುವ ಪರವಾನಿಗೆ ಇಲ್ಲದೆಯೇ ಅವರ ಖಾಸಗಿ ವಾಹನಗಳನ್ನು ಟ್ಯಾಕ್ಸಿಗಳಾಗಿ ಚಲಾಯಿಸುತ್ತಿದ್ದಾರೆ ಹಾಗೂ ಅವರು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಸಾಧ್ಯತೆಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News