×
Ad

ಎಲ್ಲ ಸೌದಿ ನಗರಗಳಿಗೆ ಭೇಟಿ ನೀಡಲು ಉಮ್ರಾ ಯಾತ್ರಿಕರಿಗೆ ಅವಕಾಶ

Update: 2018-09-18 21:48 IST

ಮಕ್ಕಾ, ಸೆ. 18: ವಿದೇಶಿ ಉಮ್ರಾ ಯಾತ್ರಿಗಳು ಅವರ 30 ದಿನಗಳ ಉಮ್ರಾ ವೀಸಾದಡಿ ಸೌದಿ ಅರೇಬಿಯದ ಯಾವುದೇ ನಗರಕ್ಕೆ ಭೇಟಿ ನೀಡಬಹುದು ಎಂದು ಸೌದಿ ಅರೇಬಿಯ ಸೋಮವಾರ ಘೋಷಿಸಿದೆ ಎಂದು ‘ಅಲ್ ಅರೇಬಿಯ’ ವರದಿ ಮಾಡಿದೆ.

ಆದಾಗ್ಯೂ, ಅವರು 30 ದಿನಗಳ ಉಮ್ರಾ ವಾಸ್ತವ್ಯದ ಅವಧಿಯಲ್ಲಿ 15 ದಿನಗಳನ್ನು ಮಕ್ಕಾ ಮತ್ತು ಮದೀನಾಗಳಲ್ಲಿರುವ ಎರಡು ಪ್ರಮುಖ ಮಸೀದಿಗಳ ಭೇಟಿಗಾಗಿ ವಿನಿಯೋಗಿಸಬೇಕು ಎಂದು ಉಮ್ರಾ ವ್ಯವಹಾರಗಳ ಹಜ್ ಸಚಿವಾಲಯದ ಅಧೀನ ಕಾರ್ಯದರ್ಶಿ ಅಬ್ದುಲಝೀಝ್ ವಝ್ಝನ್ ‘ಕ್ಸಿನುವಾ’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವಾರ 1,000ಕ್ಕೂ ಅಧಿಕ ಉಮ್ರಾ ಯಾತ್ರಿಗಳು ಸೌದಿ ಅರೇಬಿಯಕ್ಕೆ ಆಗಮಿಸಿದ್ದಾರೆ ಎಂದು ಅವರು ತಿಳಿಸಿದರು.

 ಕಳೆದ ನಾಲ್ಕು ದಿನಗಳ ಅವಧಿಯಲ್ಲಿ 25,000ಕ್ಕೂ ಅಧಿಕ ಉಮ್ರಾ ವೀಸಾಗಳನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News