ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದ ಸೌದಿಯ ಒಂಟೆ ಉತ್ಸವ

Update: 2018-09-22 16:03 GMT

ಜಿದ್ದಾ, ಸೆ. 22: ಸೌದಿ ಅರೇಬಿಯದ ತೈಫ್‌ನಲ್ಲಿ ನಡೆದ ‘ಯುವರಾಜ ಒಂಟೆ ಉತ್ಸವ’ ಜಗತ್ತಿನಲ್ಲೇ ಅತಿ ದೊಡ್ಡದು ಎಂದು ಗಿನ್ನೆಸ್ ವಿಶ್ವ ದಾಖಲೆ ಶುಕ್ರವಾರ ತಿಳಿಸಿದೆ.

ಆಗಸ್ಟ್ 11 ರಿಂದ ಶನಿವಾರದವರೆಗೆ ನಡೆದ ಉತ್ಸವದಲ್ಲಿ 11,186 ಒಂಟೆಗಳು ಭಾಗವಹಿಸಿವೆ ಹಾಗೂ ಸುಮಾರು 800 ಓಟಗಳು ನಡೆದಿವೆ ಎಂದು ಸೌದಿ ಪ್ರೆಸ್ ಏಜನ್ಸಿ (ಎಸ್‌ಪಿಎ) ವರದಿ ಮಾಡಿದೆ.

ಸೌದಿ ಒಂಟೆಗಳ ಒಕ್ಕೂಟದ ಅಧ್ಯಕ್ಷ ರಾಜಕುಮಾರ ಫಾಹದ್ ಬಿನ್ ಜಲಾವಿ ಗಿನ್ನೆಸ್ ಪ್ರತಿನಿಧಿ ಅಹ್ಮದ್ ಜಮಾಲ್ ಅಲ್ದಿನ್‌ರಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದರು.

ಉತ್ಸವದಲ್ಲಿ ಭಾಗವಹಿಸಿದವರಿಗೆ 14.3 ಮಿಲಿಯ ಡಾಲರ್ (ಸುಮಾರು 103 ಕೋಟಿ ರೂಪಾಯಿ) ವೌಲ್ಯದ ಬಹುಮಾನಗಳನ್ನು ನೀಡಲಾಗಿದೆ. ಸೌದಿ ಅರೇಬಿಯ, ಇತರ ಕೊಲ್ಲಿ ಮತ್ತು ಅರಬ್ ದೇಶಗಳಿಂದ ಬಂದ ಒಂಟೆಗಳು ಉತ್ಸವದಲ್ಲಿ ಭಾಗವಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News