×
Ad

ಸೌದಿಯಲ್ಲಿ ವೈಭವದ ರಾಷ್ಟ್ರೀಯ ದಿನಾಚರಣೆ: 9 ಲಕ್ಷ ಸುಡುಮದ್ದುಗಳೊಂದಿಗೆ ಗಿನ್ನೆಸ್ ದಾಖಲೆ

Update: 2018-09-24 22:48 IST

ಜಿದ್ದಾ, ಸೆ. 24: ಸೌದಿ ಅರೇಬಿಯ ರವಿವಾರ ಅತ್ಯಂತ ವೈಭವದೊಂದಿಗೆ ರಾಷ್ಟ್ರೀಯ ದಿನವನ್ನು ಆಚರಿಸಿತು.

ಸೌದಿ ಅರೇಬಿಯದಾದ್ಯಂತದ 20 ನಗರಗಳಲ್ಲಿನ 58 ವೇದಿಕೆಗಳಲ್ಲಿ ಏಕಕಾಲದಲ್ಲಿ 9 ಲಕ್ಷ ಸುಡುಮದ್ದುಗಳ ಪ್ರದರ್ಶನ ನಡೆಯಿತು ಹಾಗೂ ಇದು ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ದಾಖಲಾಯಿತು.

ಅತ್ಯಧಿಕ ಸುಡುಮದ್ದುಗಳನ್ನು ಸುಟ್ಟ ಈವರೆಗಿನ ದಾಖಲೆ ಫಿಲಿಪ್ಪೀನ್ಸ್‌ನ 2016ರ ಹೊಸ ವರ್ಷಾಚರಣೆಯಲ್ಲಿ ನಿರ್ಮಾಣವಾಗಿತ್ತು. ಅಂದು 8,10,904 ಸುಡುಮದ್ದುಗಳನ್ನು ಸುಡಲಾಗಿತ್ತು. ಅದು ಸುರಿಯುತ್ತಿರುವ ಮಳೆಯಲ್ಲಿ ಒಂದು ಗಂಟೆ ಕಾಲ ನಡೆದಿತ್ತು.

ಸೌದಿ ರಾಯಲ್ ಪಡೆಯ 12 ವಿಮಾನಗಳು ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುವಂಥ ಪ್ರದರ್ಶನ ನೀಡಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News