ಸೌದಿ: ಸುದ್ದಿ ಕಾರ್ಯಕ್ರಮ ನಿರೂಪಿಸಿದ ಪ್ರಥಮ ಮಹಿಳೆ

Update: 2018-09-24 17:22 GMT

ರಿಯಾದ್, ಸೆ. 24: ಸೌದಿ ಅರೇಬಿಯದ ಸರಕಾರಿ ಒಡೆತನದ ‘ಸೌದಿ ಟಿವಿ ಚಾನೆಲ್ 1’ರಲ್ಲಿ ಮಹಿಳೆಯೊಬ್ಬರು ಸಂಜೆಯ ಪ್ರಮುಖ ಸುದ್ದಿ ಕಾರ್ಯಕ್ರಮವನ್ನು ನಿರೂಪಿಸುವ ಮೂಲಕ ಗುರುವಾರ ಇತಿಹಾಸವನ್ನು ಸೃಷ್ಟಿಸಿದರು.

ವಿಯಾಮ್ ಅಲ್ ದಖೀಲ್ ಸೌದಿ ಅರೇಬಿಯದ ಸರಕಾರಿ ಒಡೆತನದ ಟಿವಿ ಚಾನೆಲ್‌ಗಳಲ್ಲಿ ಕಾರ್ಯಕ್ರಮ ನಿರೂಪಿಸಿದ ಮೊದಲ ಮಹಿಳೆಯಾದರು. ಅವರು ಪುರುಷ ನಿರೂಪಕ ಉಮರ್ ಅಲ್ ನಶ್ವಾನ್ ಜೊತೆ ರಾತ್ರಿ 9:30ರ ಸುದ್ದಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾಮಾನ್ಯವಾಗಿ ಸೌದಿ ಅರೇಬಿಯದಲ್ಲಿ ಸಂಜೆಯ ಸಮಗ್ರ ಸುದ್ದಿ ಕಾರ್ಯಕ್ರಮಗಳನ್ನು ಪುರುಷರೇ ನಿಭಾಯಿಸುತ್ತಾರೆ. ಬೆಳಗ್ಗಿನ ಲಘು ಸುದ್ದಿ ಪ್ರಸಾರ, ಮಹಿಳಾ ಕಾರ್ಯಕ್ರಮಗಳು, ಅಡುಗೆ ಕಾರ್ಯಕ್ರಮಗಳು ಮತ್ತು ಹವಾಮಾನ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ಮಹಿಳೆಯರು ನಿರೂಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News