ಸೌದಿ: ಅತಿ ವೇಗದ ರೈಲು ಯೋಜನೆ ಉದ್ಘಾಟನೆ

Update: 2018-09-25 14:51 GMT

ರಿಯಾದ್, ಸೆ. 25: ಸೌದಿ ಅರೇಬಿಯದ ದೊರೆ ಸಲ್ಮಾನ್ ಮಂಗಳವಾರ ಹರಮೈನ್ ಅತಿ ವೇಗದ ರೈಲು ಯೋಜನೆಯನ್ನು ಉದ್ಘಾಟಿಸಿದರು. ರೈಲು ತನ್ನ ವಾಣಿಜ್ಯ ಓಡಾಟವನ್ನು ಮುಂದಿನ ತಿಂಗಳು ಆರಂಭಿಸಲಿದೆ.

450 ಕಿ.ಮೀ. ಉದ್ದದ ರೈಲು ಹಳಿಯು ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾವನ್ನು ಸಂಪರ್ಕಿಸುತ್ತದೆ. ಅದೂ ಅಲ್ಲದೆ, ಜಿದ್ದಾ, ದೊರೆ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೊರೆ ಅಬ್ದುಲ್ಲಾ ಆರ್ಥಿಕ ನಗರಗಳ ಮೂಲಕ ಹಾದು ಹೋಗುತ್ತದೆ.

ಸೌದಿ ಅರೇಬಿಯದ ಮಹತ್ವಾಕಾಂಕ್ಷೆಯ ‘ಮುನ್ನೋಟ 2030’ರ ಮಹತ್ವದ ಭಾಗ ಇದಾಗಿದೆ ಎಂದು ಸೌದಿ ಅರೇಬಿಯದ ಸಾರಿಗೆ ಸಚಿವ ನಬೀಲ್ ಬಿನ್ ಮುಹಮ್ಮದ್ ಅಲ್-ಅಮೂದಿ ಹೇಳಿದರು.

6 ಕೋಟಿ ಪ್ರಯಾಣಿಕರ ಸಾಗಾಟ

ನೂತನ ಅತಿ ವೇಗದ ರೈಲು ಯೋಜನೆಯು ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಯಲ್ಲಿ 35 ರೈಲುಗಳು ಓಡಾಟ ನಡೆಸಲಿದ್ದು, ತಲಾ 417 ಆಸನಗಳನ್ನು ಹೊಂದಿವೆ. ಅವುಗಳು ವರ್ಷಕ್ಕೆ 6 ಕೋಟಿ ಪ್ರಯಾಣಿಕರನ್ನು ಸಾಗಿಸಲಿವೆ. ಇದು ಈ ವಲಯದ ಮೊದಲ ಅತಿ ವೇಗದ ರೈಲು ಯೋಜನೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News