ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆಗೆ ಭಾರತ, ಪಾಕ್ ಗಾಲಿಕುರ್ಚಿ ಕ್ರಿಕೆಟ್ ತಂಡಗಳ ಭೇಟಿ

Update: 2018-09-25 16:03 GMT

ದುಬೈ,ಸೆ.25: ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್‌ನಲ್ಲಿ ಅತ್ಯಂತ ಸುಧಾರಿತ ಮತ್ತು ದೊಡ್ಡ ಆಸ್ಪತ್ರೆಯಾಗಿರುವ ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಸೆಪ್ಟೆಂಬರ್ 18ರಂದು ಭಾರತ ಮತ್ತು ಪಾಕಿಸ್ತಾನದ ಗಾಲಿಕುರ್ಚಿ (ವೀಲ್‌ಚೇರ್) ಕ್ರಿಕೆಟ್ ತಂಡದ ಸದಸ್ಯರಿಗೆ ಆತಿಥ್ಯವನ್ನು ನೀಡಿತು. ಕ್ರಿಕೆಟ್ ತಂಡದ ಸದಸ್ಯರನ್ನು ತುಂಬೆ ಗ್ರೂಪ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಸಮಿತಿ (ಸಿಎಸ್‌ಆರ್)ನ ಮುಖ್ಯಸ್ಥ ಅಕ್ರಂ ಮೊಯಿದಿನ್ ತುಂಬೆ ಸ್ವಾಗತಿಸಿದರು. ಆಸ್ಪತ್ರೆಯ ಸುಧಾರಿತ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಸೌಲಭ್ಯಗಳನ್ನು ತಂಡದ ಸದಸ್ಯರು ಶ್ಲಾಘಿಸಿದರು. ಅಕ್ರಂ ಮೊಯಿದಿನ್ ತುಂಬೆ ಆಟಗಾರರಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

ಭಾರತೀಯ ತಂಡದ ಆಟಗಾರ ಮತ್ತು ಭಾರತೀಯ ವಾಯುಪಡೆಯ ಮಾಜಿ ಸ್ಕ್ವಾಡ್ರನ್ ಲೀಡರ್ ಅಭಯ್ ಪ್ರತಾಪ್ ಸಿಂಗ್‌ಗೆ ಈ ಭೇಟಿಯ ವೇಳೆ ಆಶ್ಚರ್ಯವೊಂದು ಕಾದಿತ್ತು. ಹನ್ನೊಂದು ವರ್ಷಗಳ ಹಿಂದೆ ನಡೆದ ದುರ್ಘಟನೆಯಲ್ಲಿ ಸೊಂಟದಿಂದ ಕೆಳಗಿನ ಶಕ್ತಿಯನ್ನೇ ಕಳೆದುಕೊಂಡು ವೀಲ್‌ಚೇರ್‌ಗೆ ಸೀಮಿತವಾಗಿದ್ದ ಸಿಂಗ್ ಇದೇ ಮೊದಲ ಬಾರಿ ಎದ್ದು ನಡೆದಾಡಿದರು. ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆಯಲ್ಲಿ ಲಭ್ಯವಿರುವ ಎಸ್ಕೊ ಬಯೋನಿಕ್ ಸೂಟ್ ಎಂಬ ಅಪೂರ್ವ ತಂತ್ರಜ್ಞಾನದ ಫಲವಾಗಿ ಸಿಂಗ್ ಅವರ ಎದ್ದು ನಡೆಯಬೇಕೆಂಬ ಕನಸು ನಿಜವಾಯಿತು. ಈ ವೇಳೆ ಭಾವುಕರಾದ ಅವರು ಈ ಕ್ಷಣವನ್ನು ತನ್ನ ಜೀವನದುದ್ದಕ್ಕೂ ನೆನಪಿನಲ್ಲಿಡುವುದಾಗಿ ತಿಳಿಸಿದರು.

ತುಂಬೆ ಗ್ರೂಪ್‌ನ ಆರೋಗ್ಯಸೇವೆ ವಿಭಾಗದಡಿ ಕಾರ್ಯಾಚರಿಸುವ ತುಂಬೆ ಫಿಸಿಕಲ್ ಥೆರಪಿ ಮತ್ತು ರಿಹ್ಯಾಬಿಲಿಟೇಶನ್ ಆಸ್ಪತ್ರೆ ಗಲ್ಫ್ ವೈದ್ಯಕೀಯ ವಿದ್ಯಾನಿಲಯ ಶೈಕ್ಷಣಿಕ ಆರೋಗ್ಯ ವ್ಯವಸ್ಥೆ ಅಧಿನದ ಒಂದು ಶೈಕ್ಷಣಿಕ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News