ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಘಟಕದ ಮಾಸಿಕ ಸಭೆ

Update: 2018-09-29 18:06 GMT

ಮದೀನಾ, ಸೆ. 29: ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಘಟಕ ಇದರ ಮಾಸಿಕ ಸಭೆಯು ಮದೀನಾ ಮುನವ್ವರದ ಹವಾಲಿಯಲ್ಲಿ ನಡೆಯಿತು.

ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಕಾವಳಕಟ್ಟೆ ಇದರ ಸಂಸ್ಥಾಪಕ ಡಾ. ಹಝ್ರತ್ ಮೌಲಾನಾ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಅವರು ಉದ್ಘಾಟಿಸಿ, ಅಲ್ ಖಾದಿಸ ಎಜುಕೇಶನ್ ಅಕಾಡೆಮಿಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಘಟಕದ ಅಧ್ಯಕ್ಷ ಫಾರೂಕ್ ನಈಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ವೇಳೆ ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಘಟಕಕ್ಕೆ ನೂತನ ಉಪಾಧ್ಯಕ್ಷ ರಾಗಿ ರಫೀಕ್ ಕಾಪು ಅವರನ್ನು  ನೇಮಿಸಲಾಯಿತು. ಖಜಾಂಚಿಯಾಗಿ ತಾಜುದ್ದೀನ್ ಸುಳ್ಯ ಹಾಗೂ ಇತರ 11 ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಯಿತು. ಈ ವೇಳೆ ಅಲ್ ಖಾದಿಸ ಎಜುಕೇಶನ್ ಅಕಾಡೆಮಿ ಮದೀನಾ ಘಟಕದ ಕಾರ್ಯದರ್ಶಿ ಜಬ್ಬಾರ್ ಉಪ್ಪಿನಂಗಡಿ, ಅಶ್ರಫ್ ಸಖಾಫಿ ನೂಜಿ, ಇಜಾಝ್ ಹುಸೈನ್, ನಿಸಾರ್ ಅಹ್ಮದ್ ಕಾವಳಕಟ್ಟೆ, ಮುಹಮ್ಮದ್ ಶಬೀರ್ ಕಾವಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಅಲ್ ಖಾದಿಸ ಎಜುಕೇಶನ್ ಅಕಾಡೆಮಿಯ ಆರ್ಗನೈಸರ್ ಕೆ.ಎಚ್. ಯೂಸುಫ್ ಮದನಿ ಸ್ವಾಗತಿಸಿದರು. ಉಮರ್ ಗೇರುಕಟ್ಟೆ ವಂದಿಸಿದರು.

Writer - ಹಕೀಂ ಮದೀನಾ

contributor

Editor - ಹಕೀಂ ಮದೀನಾ

contributor

Similar News