ಸೌದಿ: ‘ಅತಿ ವೇಗದ ರೈಲಿನ’ ವೇಳಾಪಟ್ಟಿ ಪ್ರಕಟ

Update: 2018-09-30 16:12 GMT

ಜಿದ್ದಾ, ಸೆ. 30: ಸೌದಿ ಅರೇಬಿಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಹರಮೈನ್ ಅತಿ ವೇಗದ ರೈಲಿನ ಮೊದಲ ಸಂಚಾರದ ವಿವರಗಳನ್ನು ಮಕ್ಕಾದ ಸ್ಥಳೀಯಾಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದೆ.

ರೈಲಿನ ಮೊದಲ ಪ್ರಯಾಣ ಅಕ್ಟೋಬರ್ 4ರಂದು ನಡೆಯಲಿದೆ. ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಅತಿ ವೇಗದ ರೈಲು ಮಕ್ಕಾ ಮತ್ತು ಮದೀನಾಗಳ ನಡುವೆ ದಿನಕ್ಕೆ ಎರಡೂ ದಿಕ್ಕಿನಲ್ಲಿ 8 ಬಾರಿ ಓಡಲಿದೆ.

2019ರ ಆರಂಭದಿಂದ ರೈಲಿನ ಓಡಾಟದ ಸಂಖ್ಯೆ ದಿನಕ್ಕೆ 12ಕ್ಕೆ ಏರಲಿದೆ. ರೈಲುಗಳು ಪ್ರತಿ ಗುರುವಾರ, ಶುಕ್ರವಾರ, ಶನಿವಾರ ಮತ್ತು ರವಿವಾರಗಳಂದು ಪ್ರತಿ 60 ನಿಮಿಷಗಳಿಗೊಮ್ಮೆ ಓಡಲಿದೆ.

ಹರಮೈನ್ ಹೈ ಸ್ಪೀಡ್ ರೈಲು 5 ನಿಲ್ದಾಣಗಳಲ್ಲಿ ನಿಲ್ಲಲಿದೆ: ಮಕ್ಕಾ, ಜಿದ್ದಾ, ದೊರೆ ಅಬ್ದುಲಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೊರೆ ಅಬ್ದುಲ್ಲಾ ಎಕನಾಮಿಕ್ ಸಿಟಿ ಮತ್ತು ಮದೀನಾ. ಮಧ್ಯಪ್ರಾಚ್ಯದಲ್ಲೇ ಅತ್ಯಂತ ದೊಡ್ಡ ವಿದ್ಯುಚ್ಚಾಲಿತ ಅತಿ ವೇಗದ ರೈಲು ಯೋಜನೆಯನ್ನು ದೊರೆ ಸಲ್ಮಾನ್ ಮಂಗಳವಾರ ಉದ್ಘಾಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News