ಕೆಎಸ್‌ರಿಲೀಫ್‌ನಿಂದ ಯಮನ್ ಜಿಲ್ಲೆಯಲ್ಲಿ 185 ಟನ್ ಆಹಾರ ವಿತರಣೆ

Update: 2018-09-30 16:40 GMT

ಜಿದ್ದಾ, ಸೆ. 30: ಸಂಘರ್ಷಪೀಡಿತ ಯಮನ್‌ನ ದಾಲೆ ಪ್ರಾಂತದ ಅಲ್-ಅಝಾರಿಕ್ ಜಿಲ್ಲೆಗೆ ದೊರೆ ಸಲ್ಮಾನ್ ಮಾನವೀಯ ನೆರವು ಮತ್ತು ಪರಿಹಾರ ಕೇಂದ್ರ (ಕೆಎಸ್‌ರಿಲೀಫ್) 185 ಟನ್ ಆಹಾರ ಪೂರೈಸಿದೆ.

ಯಮನ್‌ನ ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿದ ಸರಕಾರದ ನೆರವಿನೊಂದಿಗೆ, ಸರಕು ಆಗಮಿಸಿದ ಕೂಡಲೇ ಜಿಲ್ಲೆಯಾದ್ಯಂತ ವಿತರಣೆಯನ್ನು ಆರಂಭಿಸಲಾಗಿದೆ ಹಾಗೂ ಅದು ಹಲವು ದಿನಗಳ ಕಾಲ ಮುಂದುವರಿಯಲಿದೆ.

ತೀವ್ರ ಬರಗಾಲದಿಂದಾಗಿ ಅಲ್-ಅಝಾರಿಕ್ ಜಿಲ್ಲೆ ತೀವ್ರ ಸಂಕಷ್ಟಕ್ಕೊಳಗಾಗಿತ್ತು ಹಾಗೂ ಅಲ್ಲಿ ಮಾನವೀಯ ಬಿಕ್ಕಟ್ಟು ನೆಲೆಸಿತ್ತು. ಶುಕ್ರವಾರ ಮಾರಿಬ್ ಪ್ರಾಂತದಲ್ಲಿ ಕೇಂದ್ರವು 2,500 ಆಹಾರದ ಚೀಲಗಳನ್ನು ವಿತರಿಸಿತು. ಇದರಿಂದ 15,000 ಮಂದಿ ಪ್ರಯೋಜನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News