ಯುಎಇ: 3.55 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ಗೆ ಅಂಗೀಕಾರ

Update: 2018-09-30 16:43 GMT

ದುಬೈ, ಸೆ. 30: ಯುಎಇ ರವಿವಾರ ಮುಂದಿನ ಮೂರು ವರ್ಷಗಳಿಗಾಗಿನ ಕೇಂದ್ರ ಬಜೆಟನ್ನು ಅಂಗೀಕರಿಸಿದೆ. ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

180 ಬಿಲಿಯ ದಿರ್ಹಮ್ (ಸುಮಾರು 3.55 ಲಕ್ಷ ಕೋಟಿ ರೂಪಾಯಿ) ಗಾತ್ರದ ಬಜೆಟ್‌ನ ಅರ್ಧದಷ್ಟು ನಿಧಿಯನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಸಮುದಾಯ ಅಭಿವೃದ್ಧಿ ಯೋಜನೆಗಳಿಗಾಗಿ ಮೀಸಲಿಡಲಾಗಿದೆ.

ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈಯ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅಧ್ಯಕ್ಷತೆ ವಹಿಸಿದ ಸಭೆಯು ಶೂನ್ಯ ಕೊರತೆಯ ಬಜೆಟ್‌ಗೆ ಅಂಗೀಕಾರ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News