ಯುಎಇಯಿಂದ ಭಾರತೀಯರ ಶವ ವಾಪಸಾತಿಗೆ 50 ಶೇ. ರಿಯಾಯಿತಿ ಮುಂದುವರಿಕೆ

Update: 2018-09-30 16:52 GMT

ದುಬೈ, ಸೆ. 30: ಯುಎಇಯಿಂದ ಭಾರತೀಯರ ಮೃತದೇಹಗಳನ್ನು ವಾಪಸ್ ತರುವುದರ ಮೇಲೆ ನೀಡಲಾಗುತ್ತಿದ್ದ 50 ಶೇಕಡ ವಿನಾಯಿತಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಹಿಂದಕ್ಕೆ ಪಡೆಯಲು ಏರ್ ಇಂಡಿಯ ನಿರ್ಧರಿಸಿದೆ ಎಂದು ದ ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

ಏರ್ ಇಂಡಿಯವು ಯಥಾಸ್ಥಿತಿಯನ್ನು ಕಾಯ್ದುಕೊಂಡು ಬರುವುದು ಹಾಗೂ ಯುಎಇಯಿಂದ ಭಾರತೀಯರ ಮೃತದೇಹಗಳನ್ನು ವಾಪಸ್ ತರುವುದರ ಮೇಲೆ ನೀಡಲಾಗುತ್ತಿದ್ದ 50 ಶೇಕಡ ವಿನಾಯಿತಿಯನ್ನು ಮುಂದುವರಿಸುವುದು ಎಂದು ಏರ್ ಇಂಡಿಯದ ದುಬೈಯಲ್ಲಿರುವ ಅಧಿಕಾರಿಗಳು ಹೇಳಿದ್ದಾರೆ.

ಈ ನಿರ್ಧಾರವು ಏರ್ ಇಂಡಿಯದ ಬಜೆಟ್ ವಿಭಾಗ ‘ಏರ್ ಇಂಡಿಯ ಎಕ್ಸ್‌ಪ್ರೆಸ್’ಗೂ ಅನ್ವಯಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News