ಶಾರ್ಜಾ: ತುಂಬೆ ವೈದ್ಯಕೀಯ, ದಂತ ಚಿಕಿತ್ಸೆ ಸ್ಪೆಶಾಲಿಟಿ ಕೇಂದ್ರಕ್ಕೆ ಏಳನೇ ವರ್ಷದ ಸಂಭ್ರಮ

Update: 2018-10-01 17:24 GMT

ಶಾರ್ಜಾ, ಅ.1: ತುಂಬೆ ಸಮೂಹದ ಆರೋಗ್ಯ ಸೇವೆ ವಿಭಾಗದ ಅಧೀನದಲ್ಲಿರುವ ಶಾರ್ಜಾದ ಪ್ರಮುಖ ಶೈಕ್ಷಣಿಕ ಆಸ್ಪತ್ರೆ ತುಂಬೆ ಮೆಡಿಕಲ್ ಆ್ಯಂಡ್ ಡೆಂಟಲ್ ಸ್ಪೆಶಾಲಿಟಿ ಆಸ್ಪತ್ರೆಯ ಏಳನೇ ವಾರ್ಷಿಕೋತ್ಸವವನ್ನು ಶುಕ್ರವಾರ ಶಾರ್ಜಾದ ಶೆರಟನ್ ಹೋಟೆಲ್‌ನಲ್ಲಿ ಆಚರಿಸಲಾಯಿತು.

ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ತುಂಬೆ ಮೊಹಿಯುದ್ದೀನ್ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಹೊಸಮ್ ಹಮ್ದಿ, ಆಸ್ಪತ್ರೆಯ ಮುಖ್ಯ ಆಪರೇಟಿಂಗ್ ಅಧಿಕಾರಿ ಡಾ. ಮನೀಶ್ ಸಿಂಘಾಲ್ ಮತ್ತು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಶಾಜು ಫಿಲಿಪ್ ಈ ವೇಳೆ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ತುಂಬೆ ಮೊಹಿಯುದ್ದೀನ್ ಅವರು ತುಂಬೆ ಮೆಡಿಕಲ್ ಆ್ಯಂಡ್ ಡೆಂಟಲ್ ಸ್ಪೆಶಾಲಿಟಿ ಆಸ್ಪತ್ರೆಯ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸಮಾಜದ ಎಲ್ಲ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಆಸ್ಪತ್ರೆಯ ಪಾತ್ರದ ಬಗ್ಗೆ ಅವರು ಒತ್ತು ನೀಡಿದರು. ಈ ವೇಳೆ ತುಂಬೆ ಮೆಡಿಕಲ್ ಆ್ಯಂಡ್ ಡೆಂಟಲ್ ಸ್ಪೆಶಾಲಿಟಿ ಆಸ್ಪತ್ರೆಯು ಏಳು ವರ್ಷಗಳು ನಡೆದುಬಂದ ಹಾದಿಯ ಕುರಿತ ವೀಡಿಯೊವನ್ನು ಸಭಿಕರ ಮುಂದೆ ಪ್ರದರ್ಶಿಸಲಾಯಿತು. ಜೊತೆಗೆ ಆಸ್ಪತ್ರೆ ಸಿಬ್ಬಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದ ಭಾಗವಾಗಿ ಅತ್ಯುತ್ತಮ ಸೇವೆ ನೀಡಿದ ಸಿಬ್ಬಂದಿಯನ್ನು ಗುರುತಿಸಿ ಅವರಿಗೆ ಉಡುಗೊರೆಯನ್ನು ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ಏರ್ಪಾಟು ಮಾಡಲಾಗಿತ್ತು.

ಶಾರ್ಜಾದಲ್ಲಿರುವ ತುಂಬೆ ಮೆಡಿಕಲ್ ಆ್ಯಂಡ್ ಡೆಂಟಲ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳನ್ನು ಮತ್ತು ಸೇವೆಗಳನ್ನು ಒದಗಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News