ಅಬುಧಾಬಿಯಲ್ಲಿ 14 ಕೊಟಿ ರೂ. ಗೆದ್ದ ಭಾರತೀಯ

Update: 2018-10-03 16:51 GMT

ಅಬುಧಾಬಿ (ಯುಎಇ), ಅ. 3: ‘ಬಿಗ್ ಟಿಕೆಟ್ ಅಬುಧಾಬಿ’ ಲಾಟರಿಯಲ್ಲಿ ಬುಧವಾರ ಭಾರತೀಯರೊಬ್ಬರು 7 ಮಿಲಿಯ ದಿರ್ಹಮ್ (ಸುಮಾರು 14 ಕೋಟಿ ರೂಪಾಯಿ) ಬಹುಮಾನ ಗೆದ್ದಿದ್ದಾರೆ.

ಎಂದಿನಂತೆ ಅಗ್ರ 8ರ ಬಹುಮಾನಗಳನ್ನು ಭಾರತೀಯರೇ ಗೆದ್ದಿದ್ದಾರೆ.

ಮುಹಮ್ಮದ್ ಎಂಬವರು ಬಂಪರ್ ಬಹುಮಾನ ಗೆದ್ದವರು.

ಅದೇ ವೇಳೆ, ಡುಂಗಿ ಕಿಶೋರ್ ಕುಮಾರ್ ಎಂಬವರು ಬಿಎಂಡಬ್ಲು ಸೀರೀಸ್ 3 ಕಾರನ್ನು ಗೆದ್ದಿದ್ದಾರೆ.

ಇಂದಿನ ಬಹುಮಾನ ವಿಜೇತರಲ್ಲಿ ನಾಲ್ವರು ಭಾರತೀಯರು, ಇಬ್ಬರು ಪಾಕಿಸ್ತಾನಿಯರು ಮತ್ತು ಓರ್ವ ಕೆನ್ಯ ಪ್ರಜೆ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News