ತುಂಬೆ ಆಸ್ಪತ್ರೆ, ಗಲ್ಫ್ ಮೆಡಿಕಲ್ ಕಾಲೇಜ್: ವಾರ್ಷಿಕ ಆರೋಗ್ಯ ವಿಮೆ ಸಮಾವೇಶ

Update: 2018-10-04 18:16 GMT

ಅಜ್ಮಾನ್‌, ಅ.4: ತುಂಬೆ ಆಸ್ಪತ್ರೆ ಹಾಗೂ ಗಲ್ಫ್ ಮೆಡಿಕಲ್ ಕಾಲೇಜಿನ ಜಂಟಿ ಆಯೋಜನೆಯಲ್ಲಿ ವಾರ್ಷಿಕ ಆರೋಗ್ಯ ವಿಮೆ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಯುಎಇಯ ಅಜ್ಮಾನ್‌ನಲ್ಲಿರುವ ಫೇರ್‌ಮಾಂಟ್ ಹೋಟೆಲ್‌ನಲ್ಲಿ ಗುರುವಾರ ನಡೆಯಿತು.

ಯುಎಇಯ ವಿಮಾ ಕ್ಷೇತ್ರದ ಪ್ರಮುಖರನ್ನು ಈ ಸಂದರ್ಭ ಗೌರವಿಸಲಾಯಿತು.

ಯುಎಇಯ ಆರೋಗ್ಯ ಇಲಾಖೆಯ ಸಲಹೆಗಾರ ಡಾ. ಸಲೀಮ್ ಆಲ್ ದರ್ಮಕಿ ಮುಖ್ಯ ಅತಿಥಿಯಾಗಿ ಹಾಗೂ ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಹಿಯುದ್ದೀನ್ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದರು.

ತುಂಬೆ ಸಮೂಹ ಸಂಸ್ಥೆಗಳ ಆರೋಗ್ಯ ಸುರಕ್ಷಾ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಸ್ವಾಗತಿಸಿದರು. ಇಲ್ಲಿ ಆರಂಭವಾಗಲಿರುವ 500 ಹಾಸಿಗೆಗಳ ಸೌಲಭ್ಯವಿರುವ ತುಂಬೆ ವಿವಿ ಆಸ್ಪತ್ರೆ ಸಮುಚ್ಚಯವನ್ನು ಇದೇ ಸಂದರ್ಭ ಸಲೀಮ್ ಅಲ್ ದರ್ಮಕಿ ‘ಪ್ರಿ-ಲಾಂಚ್’ ಮಾಡಿದರು.

ವಿಮಾ ಕ್ಷೇತ್ರದ ತಜ್ಞರಾದ - ನೆಕ್ಟ್ಸ್‌ಕ್ಯಾರ್ ಹೆಲ್ತ್ ಇನ್ಸೂರೆನ್ಸ್‌ನ ಸಿಇಒ ಕ್ರಿಶ್ಚಿಯನ್ ಗ್ರೆಗೊರೊವಿಝ್, ನ್ಯಾಷನಲ್ ಹೆಲ್ತ್ ಇನ್ಸೂರೆನ್ಸ್ ಕಂಪೆನಿ-ದಮಾನ್ ಇನ್ಸೂರೆನ್ಸ್‌ನ ನಿರ್ದೇಶಕಿ ಮರಿಯನ್ ಕಾರ್ಬೆಟ್, ತಕಫುಲ್ ಎಮರತ್‌ನ ಸಿಇಒ ಫದಿ ಹಿಂದಿ, ಒಮಾನ್ ಇನ್ಸೂರೆನ್ಸ್‌ನ ಸಿಇಒ ಜೀನ್ ಲೂಯಿಸ್ ಲಾರೆಂಟ್, ನ್ಯೂರಾನ್ ಎಲ್‌ಎಲ್‌ಸಿಯ ಆಡಳಿತ ನಿರ್ದೇಶಕ ಉಮೈರ್ ನಿಝಾಮಿ, ಪೆಂಟಕ್ಯಾರ್ ಮೆಡಿಕಲ್ ಸರ್ವಿಸಸ್‌ನ ಡಾ. ಮುಮ್ತಾಝ್ ಹುಸೈನ್, ಎನ್‌ಎಎಸ್ ಎಡ್ಮಿನಿಸ್ಟ್ರೇಷನ್ ಸರ್ವಿಸಸ್‌ನ ಪ್ರಧಾನ ವ್ಯವಸ್ಥಾಪಕ ಜೋಯ್ ಬುಲೋಸ್, ಅಲ್ ಬುಹಾರಿಯಾ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ನಬಿಲ್ ಶನಾವನಿಯವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಳಿಕ ವಿವಿಧ ವಿಚಾರಗೋಷ್ಠಿಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News