ಸೌದಿ: ಉದ್ಯಮ ವಲಯದಲ್ಲಿ 9.86 ಲಕ್ಷ ಕೋಟಿ ರೂ. ಹೂಡಿಕೆ

Update: 2018-10-08 16:30 GMT

ಜಿದ್ದಾ, ಅ. 8: ಸೌದಿ ಅರೇಬಿಯವು ಕೈಗಾರಿಕಾ, ಸೇವಾ ಮತ್ತು ಸರಕು (ಲಾಜಿಸ್ಟಿಕ್ಸ್) ಯೋಜನೆಗಳು ಮತ್ತು ಗುತ್ತಿಗೆಗಳಲ್ಲಿ 50000 ಕೋಟಿ ಸೌದಿ ರಿಯಾಲ್ (ಸುಮಾರು 9.86 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಮಾಡಿದೆ.

ಇದು ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಹಾಗೂ ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ಸೌದಿ ಕೈಗಾರಿಕಾ ಸೊತ್ತು ಪ್ರಾಧಿಕಾರ (ಮೊಡೊನ್) ಮತ್ತು ಇತರ ಸರಕಾರಿ ಪ್ರಾಧಿಕಾರಗಳ ತೀವ್ರ ಪ್ರಯತ್ನಗಳ ಫಲವಾಗಿ ದೇಶದಲ್ಲಿ ಕೈಗಾರಿಕಾ ಹೂಡಿಕೆಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ಮಾರುಕಟ್ಟೆ ಕ್ಷೇತ್ರದಲ್ಲಿ ಮೊಡೊನ್ ಗಳಿಸಿದ ಯಶಸ್ಸು ಕೈಗಾರಿಕಾ ಕ್ಷೇತ್ರದಲ್ಲಿನ ಪ್ರಮುಖ ಅಂತಾರಾಷ್ಟ್ರೀಯ ಕಂಪೆನಿಗಳನ್ನು ಆಕರ್ಷಿಸಿದೆ ಎಂದು ಸೌದಿ ಇಂಧನ ಸಚಿವ ಖಾಲಿದ್ ಅಲ್-ಫಲೀಹ್ ರಿಯಾದ್‌ನಲ್ಲಿ ರವಿವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News