2020ರ ವೇಳೆಗೆ ಸೌದಿ ಅರೇಬಿಯದಲ್ಲಿ 63,400 ಉದ್ಯೋಗ ಸೃಷ್ಟಿ

Update: 2018-10-09 16:56 GMT

ರಿಯಾದ್, ಅ. 9: ಮೈಕ್ರೋಸಾಫ್ಟ್‌ನ ತಂತ್ರಜ್ಞಾನ ಪರಿಸರ ವ್ಯವಸ್ಥೆ (ಟೆಕ್ನಾಲಜಿ ಇಕೋಸಿಸ್ಟಮ್) ಮತ್ತು ಕ್ಲೌಡ್ ಸೇವೆಗಳು ಸೌದಿ ಅರೇಬಿಯದಲ್ಲಿ 2022ರ ವೇಳೆಗೆ 63,400ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಇಂಟರ್‌ನ್ಯಾಶನಲ್ ಡಾಟಾ ಕಾರ್ಪೊರೇಶನ್ (ಐಡಿಸಿ)ನ ಅಧ್ಯಯನವೊಂದು ಪತ್ತೆಹಚ್ಚಿದೆ.

ಯುಎಇ, ಬಹರೈನ್ ಮತ್ತು ಟರ್ಕಿ ಮುಂತಾದ ಇತರ ಮಧ್ಯಪ್ರಾಚ್ಯ ಮಾರುಕಟ್ಟೆಗಳನ್ನೂ ಅಧ್ಯಯನ ಮಾಡಿರುವ ಐಡಿಸಿ, ಕ್ಲೌಡ್ ಸೇವೆಗಳು ಮತ್ತು ಮೈಕ್ರೋಸಾಫ್ಟ್‌ನ ಇಕೋಸಿಸ್ಟಮ್ ಸೌದಿ ಅರೇಬಿಯದ ಆರ್ಥಿಕತೆಯ ಮೇಲೆ 2017 ಮತ್ತು 2022ರ ನಡುವೆ ಬೀರಲಿರುವ ಪರಿಣಾಮವನ್ನೂ ವಿಶ್ಲೇಷಿಸಿದೆ.

ಮೈಕ್ರೋಸಾಫ್ಟ್ ಇಕೋಸಿಸ್ಟಮ್, ಮೈಕ್ರೋಸಾಫ್ಟ್ ಉತ್ಪನ್ನಗಳನ್ನು ಮಾರಾಟ ಮಾಡುವ, ಅವುಗಳಿಗೆ ಸೇವೆ ನೀಡುವ ಅಥವಾ ಮೈಕ್ರೋಸಾಫ್ಟ್ ಉತ್ಪನ್ನಗಳ ಜೊತೆ ಕೆಲಸ ಮಾಡುವ ಕಂಪೆನಿಗಳನ್ನು ಒಳಗೊಂಡಿದೆ.

ಮೈಕ್ರೋಸಾಫ್ಟ್ ಇಕೋಸಿಸ್ಟಮ್ 2017ರಲ್ಲಿ 71,250 ಉದ್ಯೋಗಿಗಳನ್ನು ಪೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News