ಟರ್ಕಿ ರಾಯಭಾರಿ ಉಚ್ಚಾಟನೆಯಿಲ್ಲ: ಸೌದಿ ಸ್ಪಷ್ಟನೆ
Update: 2018-10-09 22:34 IST
ರಿಯಾದ್, ಅ. 9: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ನಿಗೂಢ ನಾಪತ್ತೆ ಹಿನ್ನೆಲೆಯಲ್ಲಿ, ಸೌದಿ ಅರೇಬಿಯ ಟರ್ಕಿ ರಾಯಭಾರಿಯನ್ನು ಉಚ್ಚಾಟಿಸಿದೆ ಎಂಬ ಇಲೆಕ್ಟ್ರಾನಿಕ್ ಮಾಧ್ಯಮವೊಂದರ ವರದಿಯನ್ನು ಸೌದಿ ಅರೇಬಿಯ ನಿರಾಕರಿಸಿದೆ.
‘ಸಂಪೂರ್ಣ ನಿರಾಧಾರದ’ ಆರೋಪಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂದು ಸೌದಿ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.