ಯುಎಇ: ಸೈಬರ್ ಅಪರಾಧಕ್ಕೆ ಇನ್ನು ಗಡಿಪಾರು ಕಡ್ಡಾಯವಲ್ಲ

Update: 2018-10-13 17:39 GMT

ದುಬೈ, ಅ. 13: ಯುಎಇಯ ಸೈಬರ್ ಅಪರಾಧ ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದ್ದು, ಇನ್ನು ಸೈಬರ್ ಅಪರಾಧಗಳಲ್ಲಿ ತೊಡಗಿದ ಜನರನ್ನು ಗಡಿಪಾರು ಮಾಡುವುದು ಕಡ್ಡಾಯವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಇಂಟರ್‌ನೆಟ್ ಮೂಲಕ ಅವಮಾನ ಮಾಡುವುದು ಹಾಗೂ ಬೆದರಿಕೆ ಹಾಕುವುದು ಸೈಬರ್ ಕಾನೂನಿನ ವ್ಯಾಪ್ತಿಗೆ ಬರುತ್ತದೆ.

ತಿದ್ದುಪಡಿಗೊಂಡ ಕಾನೂನಿನ ಪ್ರಕಾರ, ಸೈಬರ್ ಅಪರಾಧಗಳಿಗೆ ಜೈಲು ಮತ್ತು ಗಡಿಪಾರು ಶಿಕ್ಷೆ ವಿಧಿಸುವುದು ಕಡ್ಡಾಯವೇನಲ್ಲ.

ನ್ಯಾಯಾಲಯಗಳು ಅಪರಾಧಿಯನ್ನು ನಿರ್ದಿಷ್ಟ ಅವಧಿಯವರೆಗೆ ಇಲೆಕ್ಟ್ರಾನಿಕ್ ನಿಗಾದಲ್ಲಿ ಇಡಬಹುದು ಎಂದು ಕಾನೂನು ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News