ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ವತಿಯಿಂದ ರಕ್ತದಾನ ಶಿಬಿರ

Update: 2018-10-14 12:40 GMT

ಮನಾಮ, ಅ. 14: “ನಮ್ಮ ಆರೋಗ್ಯ - ನಮ್ಮ ಸಂಪತ್ತು” ಎಂಬ ಒಂದು ತಿಂಗಳ ಆರೋಗ್ಯ ಜಾಗೃತಿ ಅಭಿಯಾನ ಮತ್ತು ಮಹಾತ್ಮ ಗಾಂಧಿ ಜನ್ಮ ದಿನದ ಅಂಗವಾಗಿ ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಘಟಕವು ಸಲ್ಮಾನಿಯ ವೈದ್ಯಕೀಯ ಸಂಕಿರ್ಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಸಿಟಿ ಮ್ಯಾಕ್ಸ್ ಫ್ಯಾಶನ್ಸ್ ಮತ್ತು ಅಲ್ ಹಿಲಾಲ್ ಆಸ್ಪತ್ರೆಯ ಸಹಯೋಗದಲ್ಲಿ ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಸಂಘಟಿಸಿದ ಈ ರಕ್ತದಾನ ಶಿಬಿರದಲ್ಲಿ ಸುಮಾರು 150ಕ್ಕಿಂತಲೂ ಅಧಿಕ ರಕ್ತದಾನಿಗಳು ಭಾಗವಹಿಸಿದ್ದರು.

ಈ ಅಭಿಯಾನದ ಮುಂದುವರಿದ ಭಾಗವಾಗಿ ಅ.19 ರಂದು ಇಂಡಿಯನ್ ಸೋಷಿಯಲ್ ಫೋರಂ ಬಹರೈನ್ ಮತ್ತು ಅಲ್ ಹಿಲಾಲ್ ಆಸ್ಪತ್ರೆ ಅದ್‍ಲಿಯಾ ಜಂಟಿಯಾಗಿ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News