‘ಓಯೋ ಹೊಟೇಲ್’ನಿಂದ ಯುಎಇಯಲ್ಲಿ 10,000 ಉದ್ಯೋಗ ಸೃಷ್ಟಿ

Update: 2018-10-15 17:09 GMT

ದುಬೈ, ಅ. 15: ಭಾರತೀಯ ಹೊಟೇಲ್ ಸಮೂಹ ‘ಓಯೋ ಹೊಟೇಲ್ಸ್’ ಯುಎಇಯಲ್ಲಿ ಮುಂದಿನ 3 ವರ್ಷಗಳಲ್ಲಿ 10,000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಹೊಟೇಲ್ ಸಮೂಹದ ಸ್ಥಾಪಕ ಹಾಗೂ ಸಿಇಒ ರಿತೇಶ್ ಅಗರ್‌ವಾಲ್ ಹೇಳಿದ್ದಾರೆ.

ಯುಎಇಯ ಎಲ್ಲ ಎಮಿರೇಟ್‌ಗಳಲ್ಲಿ ಸಮೂಹವು ತನ್ನ ಜಾಲವನ್ನು ಹರಡಲಿದೆ ಹಾಗೂ ದೇಶದಲ್ಲಿ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸಲಿದೆ ಎಂದು ಅವರು ತಿಳಿಸಿದರು. ತರಬೇತಿ ಉಚಿತವಾಗಿರುತ್ತದೆ ಎಂದರು.

ಕಂಪೆನಿ ಪ್ರಸಕ್ತ ಯುಎಇಯಲ್ಲಿ 1,200 ಕೋಣೆಗಳನ್ನು ನಡೆಸುತ್ತಿದೆ ಹಾಗೂ 2020ರ ವೇಳೆಗೆ ಯುಎಇಯಲ್ಲಿ ಹೆಚ್ಚುವರಿ 12,000 ಹೊಟೇಲ್ ಕೋಣೆಗಳನ್ನು ನಿರ್ಮಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News