ಭಾರತೀಯನನ್ನು ವಜಾಗೊಳಿಸಿದ ಕಂಪೆನಿ

Update: 2018-10-17 17:41 GMT

ರಿಯಾದ್, ಅ. 17: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ‘ಮಾನಹಾನಿಕರ ಹೇಳಿಕೆ’ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದಕ್ಕಾಗಿ ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯನೊಬ್ಬನನ್ನು ಕೆಲಸದಿಂದ ಉಚ್ಚಾಟಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಬುಧವಾರ ತಿಳಿಸಿದೆ.

ರಿಯಾದ್‌ನಲ್ಲಿರುವ ಲುಲು ಹೈಪರ್‌ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳಿಗ ದೀಪಕ್ ಪವಿತ್ರನ್‌ನನ್ನು, ಸಾಮಾಜಿಕ ಮಾಧ್ಯಮದಲ್ಲಿ ‘ಸ್ತ್ರೀವಿರೋಧಿ ಹಾಗೂ ಸಂವೇದನಾರಹಿತ’ ಹೇಳಿಕೆಗಳನ್ನು ಹಾಕಿರುವುದಕ್ಕಾಗಿ ಮಂಗಳವಾರ ವಜಾಗೊಳಿಸಲಾಗಿದೆ.

‘‘ಧಾರ್ಮಿಕ ಭಾವನೆಗಳಿಗೆ ಘಾಸಿ ತರಬಹುದಾದ, ದುರುದ್ದೇಶಪೂರಿತ ಹಾಗೂ ಅವಹೇಳನಕರ ಹೇಳಿಕೆಗಳನ್ನು ಪ್ರಸಾರಿಸಲು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಿಸುವ ನಮ್ಮ ಸಿಬ್ಬಂದಿಗೆ ಸಂಬಂಧಿಸಿ ನಾವು ಕಟ್ಟುನಿಟ್ಟಿನ ಹಾಗೂ ಶೂನ್ಯ ಸಹನೆಯ ನೀತಿಯನ್ನು ಹೊಂದಿದ್ದೇವೆ’’ ಎಂದು ಲುಲು ಗ್ರೂಪ್‌ನ ಮುಖ್ಯ ಸಂಪರ್ಕಾಧಿಕಾರಿ ವಿ. ನಂದಕುಮಾರ್ ‘ಖಲೀಜ್ ಟೈಮ್ಸ್’ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News