ರಿಯಾದ್‌ನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ

Update: 2018-10-22 15:42 GMT

ಜಿದ್ದಾ, ಅ. 22: ವಿಶೇಷ ಆರ್ಥಿಕ ವಲಯವೊಂದನ್ನು ಸ್ಥಾಪಿಸಿರುವುದಾಗಿ ಸೌದಿ ಅರೇಬಿಯ ರವಿವಾರ ಪ್ರಕಟಿಸಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.

ಜಗತ್ತಿನಲ್ಲೇ ಮೊದಲನೆಯದಾದ ಈ ಮಾದರಿಯ ಆರ್ಥಿಕ ವಲಯವನ್ನು ರಿಯಾದ್‌ನಲಿ ಅಭಿವೃದ್ಧಿಪಡಿಸಲಾಗುವುದು ಎಂದು ಎಂದು ಅದು ತಿಳಿಸಿದೆ.

 ಸೌದಿ ಅರೇಬಿಯಕ್ಕೆ ಹೆಚ್ಚಿನ ಬಹುರಾಷ್ಟ್ರೀಯ ಕಂಪೆನಿಗಳನ್ನು ಆಕರ್ಷಿಸುವುದಕ್ಕಾಗಿ ಈ ವಲಯಕ್ಕೆ ವಿಶೇಷ ನಿಯಮಗಳು ಮತ್ತು ನಿಯಂತ್ರಣಗಳನ್ನು ರೂಪಿಸಲಾಗುವುದು.

‘ಇಂಟಗ್ರೇಟಡ್ ಲಾಜಿಸ್ಟಿಕ್ಸ್ ಬಾಂಡಡ್ ರೆನ್’ ಸ್ಥಾಪನೆಗಾಗಿ ರಾಜಾಜ್ಞೆಯನ್ನು ಹೊರಡಿಸಲಾಗಿದೆ.

ಸೌದಿ ಅರೇಬಿಯದ ಮಹತ್ವಾಕಾಂಕ್ಷೆಯ ‘ಮುನ್ನೋಟ 2030’ನ್ನು ಕಾರ್ಯರೂಪಕ್ಕೆ ತರುವ ಪ್ರಮುಖ ಹಂತವಾಗಿ ಈ ವಲಯವನ್ನು ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News