×
Ad

ಸರ್ಬಿಯ ಸರಕಾರದ ಜೊತೆ ತುಂಬೆ ಗ್ರೂಪ್ ಒಪ್ಪಂದ

Update: 2018-10-23 21:27 IST

ದುಬೈ,ಅ.23: ಬೆಲ್‌ಗ್ರೇಡ್‌ನಲ್ಲಿ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ತುಂಬೆ ಆಸ್ಪತ್ರೆ ನಿರ್ಮಿಸುವ ಉದ್ದೇಶದಿಂದ ತುಂಬೆ ಸಮೂಹವು ಸರ್ಬಿಯ ಸರಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ತುಂಬೆ ಸಮೂಹದ ಪರವಾಗಿ ತುಂಬೆ ಗ್ರೂಪ್‌ನ ಸಂಸ್ಥಾಪಕ ಡಾ.ತುಂಬೆ ಮೊಯ್ದಿನ್ ಮತ್ತು ಸರ್ಬಿಯ ಸರಕಾರದ ಪ್ರತಿನಿಧಿಗಳಾದ ಸರ್ಬಿಯ ಗಣರಾಜ್ಯದ ಆರೋಗ್ಯ ಸಚಿವ ಡಾ.ಲಾಟಿಬೊರ್ ಲೊಂಕರ್ ಹಾಗೂ ಶಿಕ್ಷಣ ಸಚಿವ ಪ್ರೊ.ಲಾಡೆನ್ ಸರ್ಸೆವಿಕ್ ಅವರು ಅಕ್ಟೋಬರ್ 22,2018ರಂದು ಸಹಿ ಹಾಕಿದರು.

ಸಚಿವರ ಹೊರತಾಗಿ ಸರ್ಬಿಯದ ಉನ್ನತ ಮಟ್ಟದ ನಿಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ವಿಮೆ ನಿಧಿಯ ನಿರ್ದೇಶಕ ಮತ್ತು ಬೆಲ್‌ಗ್ರೇಡ್ ವಿಶ್ವವಿದ್ಯಾಲಯದ ಔಷಧೀಯ ವಿಭಾಗದ ಪ್ರೊಫೆಸರ್ ಪ್ರೊ.ಡಾ.ಸಂಜ ರಡೊಜೆವಿಕ್-ಸ್ಕೊಡ್ರಿಕ್, ಸರ್ಬಿಯದ ಆರೋಗ್ಯ ಕೇಂದ್ರ ನಿರ್ದೇಶಕ ಮತ್ತು ಬೆಲ್‌ಗ್ರೇಡ್ ವಿಶ್ವವಿದ್ಯಾಲಯದ ಔಷಧೀಯ ವಿಭಾಗದ ಪ್ರೊಫೆಸರ್ ಡಾ.ಮಿಲಿಕ ಅಸನಿನ್, ಸಹಾಯಕ ಶಿಕ್ಷಣ ಸಚಿವೆ ಆನಾ ಲಂಗೊವಿಕ್‌ಮಿಲಿಸೆವಿಕ್ ಮತ್ತು ಆರೋಗ್ಯ ಸಚಿವರ ಸಲಹೆಗಾರ ಮಾರ್ಕೊ ಪವ್ಲೊವಿಕ್ ಉಪಸ್ಥಿತರಿದ್ದರು.

ಬೆಲ್‌ಗ್ರೇಡ್‌ನಲ್ಲಿ ಹಂತಗಳಲ್ಲಿ ನಿರ್ಮಾಣಗೊಳ್ಳಲಿರುವ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ತುಂಬೆ ಆಸ್ಪತ್ರೆ 2020ರ ವೇಳೆಗೆ ಸಂಪೂರ್ಣಗೊಂಡು ಸೇವೆಗೆ ಸಿದ್ಧವಾಗಲಿದೆ. ಸದ್ಯ ತುಂಬೆ ಸಮೂಹವು ಈ ಯೋಜನೆಯಲ್ಲಿ ಹೂಡಿಕೆ ಪಾಲುದಾರರಿಗೆ ಎದುರು ನೋಡುತ್ತಿದ್ದು 2023ರ ವೇಳೆಗೆ ಸಾರ್ವಜನಿಕರಿಗೆ ತೆರೆದುಕೊಳ್ಳಲು ನಾವು ಸಿದ್ಧತೆ ನಡೆಸುತ್ತಿರುವುದಾಗಿ ಡಾ.ತುಂಬೆ ಮೊಯ್ದಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News