×
Ad

ಚುನಾವಣೆ ಬಳಿಕ ಭಾರತದೊಂದಿಗೆ ಶಾಂತಿ ಮಾತುಕತೆ: ಇಮ್ರಾನ್

Update: 2018-10-23 22:32 IST

 ರಿಯಾದ್, ಅ. 23: ಭಾರತದಲ್ಲಿ ಮುಂದಿನ ವರ್ಷ ಚುನಾವಣೆ ನಡೆದ ಬಳಿಕ ಆ ದೇಶದೊಂದಿಗೆ ಶಾಂತಿ ಮಾತುಕತೆ ನಡೆಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.

ಸೌದಿ ಅರೇಬಿಯದ ರಾಜಧಾನಿ ರಿಯಾದ್‌ನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಖಾನ್ ಈ ಘೋಷಣೆಯನ್ನು ಮಾಡಿದರು.

‘‘ನಾನು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಾಗ, ಮೊದಲು ಮಾಡಿದ್ದು ಭಾರತದತ್ತ ಸ್ನೇಹದ ಹಸ್ತವನ್ನು ಚಾಚಿದ್ದು’’ ಎಂದು ‘ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನಿಶಿಯೇಟಿವ್’ನಲ್ಲಿ ಮಾತನಾಡಿದ ಅವರು ಹೇಳಿದರು.

ಆದರೆ, ಈ ಉಪಕ್ರಮವನ್ನು ಭಾರತ ತಿರಸ್ಕರಿಸಿತು ಎಂದರು.

‘‘ಇನ್ನು ಚುನಾವಣೆ ಮುಗಿಯುವವರೆಗೆ ನಾವು ಕಾಯುತ್ತೇವೆ. ಬಳಿಕ ಭಾರತದೊಂದಿಗೆ ಶಾಂತಿ ಮಾತುಕತೆಯನ್ನು ಪುನರಾರಂಭಿಸುತ್ತೇವೆ’’ ಎಂದು ಅವರು ಹೇಳಿದರು.

ಭಾರತದಲ್ಲಿ ಮುಂದಿನ ವರ್ಷದ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News