ಯುಎಇ ಕ್ಷಮಾದಾನ ಯೋಜನೆ 1 ತಿಂಗಳು ವಿಸ್ತರಣೆ
Update: 2018-10-30 22:20 IST
ಅಬುಧಾಬಿ, ಅ. 30: ಯುಎಇಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರು ಯಾವುದೇ ದಂಡವಿಲ್ಲದೆ ತಮ್ಮ ವಾಸ್ತವ್ಯವನ್ನು ಸಕ್ರಮಗೊಳಿಸಲು ನೀಡಲಾಗಿರುವ ಕ್ಷಮಾದಾನ ಅವಧಿಯನ್ನು ಒಂದು ತಿಂಗಳು ವಿಸ್ತರಿಸಲಾಗಿದೆ.
ಯುಎಇಯಾದ್ಯಂತ ಸ್ಥಾಪಿಸಲಾಗಿರುವ 9 ಕ್ಷಮಾದಾನ ಕೇಂದ್ರಗಳಿಗೆ ಅನಿವಾಸಿಗಳು ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎಂದು ಕೇಂದ್ರೀಯ ಗುರುತು ಮತ್ತು ಪೌರತ್ವ ಪ್ರಾಧಿಕಾರದಲ್ಲಿ ವಿದೇಶಿಯರು ಮತ್ತು ಬಂದರು ವ್ಯವಹಾರಗಳ ಮಹನಿರ್ದೇಶಕ ಬ್ರಿಗೇಡಿಯರ್ ಸಯೀದ್ ರಕನ್ ಅಲ್ ರಶೀದ್ ತಿಳಿಸಿದರು.
‘‘ಕ್ಷಮಾದಾನ ಅವಧಿಯ ಆರಂಭದಲ್ಲಿ ತಾಂತ್ರಿಕ ದೋಷಗಳಿಂದಾಗಿ ಅರ್ಜಿಗಳ ವಿಲೇವಾರಿಯಲ್ಲಿ ಕೊಂಚ ವಿಳಂಬ ಉಂಟಾಗಿತ್ತು’’ ಎಂದು ಅವರು ಹೇಳಿದರು.