ಕುವೈತ್ ನಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆ

Update: 2018-11-06 05:24 GMT

ಕುವೈತ್ ಸಿಟಿ, ನ. 6: ಕುವೈತ್ ರಾಷ್ಟ್ರದ ಹೆಚ್ಚಿನ ಕಡೆಗಳಲ್ಲಿ ಇಂದು ಬೆಳಗ್ಗೆಯಿಂದ ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗಿದೆ. 

ಕುವೈತ್ ನ ಫಾಹಿಲ್, ಮಂಗಾಫ್, ಸಾಲ್ನಿಯ, ಕುವೈತ್ ಸಿಟಿ, ಫರ್ವಾನಿಯ ಮೊದಲಾದ ಕಡೆಗಳಲ್ಲಿ ರಾತ್ರಿ ಸುಮಾರು 3 ಗಂಟೆಯಿಂದ ಮಿಂಚು, ಗುಡುಗು ಸಹಿತ ಭಾರೀ ಮಳೆಯಾಗಿದೆ.

ನಗರದ ಹೆಚ್ಚಿನ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವೆಡೆ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಹೆಚ್ಚಿನ ಕಡೆಗಳಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಕರ್ತವ್ಯಕ್ಕೆ ಹೋಗುವವರಿಗೆ ಕಷ್ಟವಾಗಿದೆ.

ನಿನ್ನೆ ಸಂಜೆಯೂ ಸುಮಾರು ಅರ್ಧ ಗಂಟೆ ಮಳೆ ಸುರಿದಿತ್ತು.

Full View

Writer - ಅಬ್ದುಲ್ ಶುಕೂರ್ ಮಲ್ಪೆ

contributor

Editor - ಅಬ್ದುಲ್ ಶುಕೂರ್ ಮಲ್ಪೆ

contributor

Similar News