×
Ad

ಸೌದಿ ಪಾಸ್‌ಪೋರ್ಟ್ ನಿಯಮಾವಳಿಯಲ್ಲಿ ಬದಲಾವಣೆ: ಇಸ್ರೇಲ್ ಮುಸ್ಲಿಮರಿಗೆ ಹಜ್ ಯಾತ್ರೆಯಿಲ್ಲ?

Update: 2018-11-08 21:05 IST

ರಿಯಾದ್, ನ. 8: ಪಾಸ್‌ಪೋರ್ಟ್ ನಿಯಮಾವಳಿಗಳಿಗೆ ಸೌದಿ ಅರೇಬಿಯ ತಂದಿರುವ ತಿದ್ದುಪಡಿಗಳ ಹಿನ್ನೆಲೆಯಲ್ಲಿ, ವಾರ್ಷಿಕ ಹಜ್ ಯಾತ್ರೆಗಾಗಿ ಮಕ್ಕಾಗೆ ಬರಲು ಇಸ್ರೇಲ್‌ನ ಮುಸ್ಲಿಮರಿಗೆ ಸಾಧ್ಯವಾಗುವುದಿಲ್ಲ ಎಂದು 'ಹಾರೆಟ್ಝ್' ಪತ್ರಿಕೆ ವರದಿ ಮಾಡಿದೆ.

ಸೌದಿ ಅರೇಬಿಯದೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ಇಸ್ರೇಲ್‌ನಿಂದ ಜನರು ಸೌದಿ ಅರೇಬಿಯಕ್ಕೆ ಬರಲು ಈವರೆಗೆ ಅವಕಾಶವಿತ್ತು.

ಆದರೆ, ಹಜ್ ಯಾತ್ರೆ ಕೈಗೊಳ್ಳಲು ಇಸ್ರೇಲ್‌ನ ಮುಸ್ಲಿಮರಿಗೆ ಜೋರ್ಡಾನ್ ನೀಡುವ ತಾತ್ಕಾಲಿಕ ಪಾಸ್‌ಪೋರ್ಟ್‌ಗಳನ್ನು ನಾವಿನ್ನು ಸ್ವೀಕರಿಸುವುದಿಲ್ಲ ಎಂಬುದಾಗಿ ಸೌದಿ ಅಧಿಕಾರಿಗಳು ಘೋಷಿಸಿದ್ದಾರೆ.

ಜೆರುಸಲೇಂ, ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿರುವ ಹಾಗೂ ಜೋರ್ಡಾನ್‌ನ ತಾತ್ಕಾಲಿಕ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಫೆಲೆಸ್ತೀನಿಯರ ಮೇಲೂ ಈ ಬದಲಾವಣೆ ಪರಿಣಾಮ ಬೀರುತ್ತದೆ. ಆದರೆ, ಫೆಲೆಸ್ತೀನಿ ಪ್ರಯಾಣ ದಾಖಲೆಗಳನ್ನು ಹೊಂದಿರುವವರ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.

ಸೌದಿ ಅರೇಬಿಯ ಮತ್ತು ಇಸ್ರೇಲ್ ನಡುವಿನ ಸಂಬಂಧ ಸುಧಾರಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್ ಕಚೇರಿಯಲ್ಲಿ ನಡೆದಿರುವ ಪತ್ರಕರ್ತ ಜಮಾಲ್ ಖಶೋಗಿ ಘೋರ ಕೃತ್ಯ ಹೌದು, ಆದರೆ, ಸೌದಿ ಅರೇಬಿಯದ ಸ್ಥಿರತೆಯೂ ಮುಖ್ಯವಾಗಿದೆ ಎಂಬುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇತ್ತೀಚೆಗೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News