ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್: ಭಾರತದ ಸೌರಭ್ ಚೌಧರಿಗೆ ಚಿನ್ನ

Update: 2018-11-08 16:14 GMT

ಕುವೈತ್ ಸಿಟಿ, ನ.8: ಇಲ್ಲಿ ನಡೆಯುತ್ತಿರುವ ಏಶ್ಯನ್ ಏರ್‌ಗನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹದಿನಾರರ ಹರೆಯದ ಶೂಟರ್ ಸೌರಭ್ ಚೌಧರಿ ಅವರು 10ಮೀಟರ್ ಏರ್ ಪಿಸ್ತೂಲ್ ಪುರುಷರ ಜೂನಿಯರ್ ವಿಭಾಗದಲ್ಲಿ ಚಿನ್ನ ಬಾಚಿಕೊಂಡಿದ್ದಾರೆ.

ಇದು ಅವರು ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ವೈಯಕ್ತಿಕ ವಿಭಾಗದಲ್ಲಿ ಪಡೆದಿರುವ ನಾಲ್ಕನೇ ಚಿನ್ನವಾಗಿದೆ. ಸೌರಭ್ ತಂಡ ಅರ್ಜುನ್(237.7) ಬೆಳ್ಳಿ ಆದರೆ ಅನ್ಮೊಲ್(195.1) ಅವರಿಗೆ ಕಂಚು ಕೈ ತಪ್ಪಿತು. ನಾಲ್ಕನೇ ಸ್ಥಾನ ಪಡೆದರು. ಚೀನಾ ತೈಪೆಯ ಹುವಾಂಗ್ ವೆಯ್ -ಟೆ (218.0) ಕಂಚು ಪಡೆದರು. ಇದರಿಂದಾಗಿ ಭಾರತಕ್ಕೆ ಮೂರು ಪದಕಗಳೊಂದಿಗೆ ಕ್ಲೀನ್ ಸ್ವೀಪ್ ಸಾಧಿಸುವ ಅವಕಾಶ ತಪ್ಪಿತು.

ಮೀರತ್‌ನ ರೈತನ ಮಗ ಸೌರಭ್ ತಿವಾರಿ ವೈಯಕ್ತಿಕ ವಿಭಾಗದಲ್ಲಿ 239.8 ಪಾಯಿಂಟ್ಸ್‌ಗಳನ್ನು ಕಲೆ ಹಾಕಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಪಡೆದರು.

ಇದಕ್ಕೂ ಮೊದಲು ಸೌರಭ್ ಚೌಧರಿ , ಅರ್ಜುನ್ ಸಿಂಗ್ ಚೀಮಾ ಮತ್ತು ಅನ್ಮೊಲ್ ಜೈನ್ ತಂಡ 1,731 ಪಾಯಿಂಟ್ಸ್‌ಗಳನ್ನು ದಾಖಲಿಸಿ ಚಿನ್ನ ಪಡೆದಿತ್ತು. ಸೌರಭ್ ತಿವಾರಿ ಅವಳಿ ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.

ಸೌರಭ್ ಕಳೆದ ಆಗಸ್ಟ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಪಡೆದಿದ್ದರು. ಸೆಪ್ಟಂಬರ್‌ನಲ್ಲಿ ನಡೆದ ವರ್ಲ್ಡ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಅಕ್ಟೋಬರ್‌ನಲ್ಲಿ ಅರ್ಜೆಂಟೀನದಲ್ಲಿ ನಡೆದ ಯೂತ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News