ದುಬೈ ಸರಕಾರದಿಂದ '30 X 30 ಫಿಟ್ನೆಸ್ ಚಾಲೆಂಜ್ 2018'

Update: 2018-11-10 05:44 GMT

ದುಬೈ, ನ. 9 : ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ದುಬೈ ಸರಕಾರದ ಕಮ್ಯುನಿಟಿ ಡೆವೆಲಪ್ ಮೆಂಟ್ ಅಥಾರಿಟಿ ಸಹಯೋಗದಲ್ಲಿ ಫಿಟ್ನೆಸ್ ಅಭಿಯಾನದ ಮೊದಲ ಕಾರ್ಯಕ್ರಮ ಶುಕ್ರವಾರ ಮುಂಜಾನೆ  ದುಬೈಯ ಅಲ್ ಮಮ್ ಝರ್ ಬೀಚ್ ನಲ್ಲಿ ನಡೆಯಿತು.

ಪ್ರತಿದಿನ ಕನಿಷ್ಠ 30 ನಿಮಿಷ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ದುಬೈ ಸರಕಾರದ ದುಬೈ ಫಿಟ್ನೆಸ್ ಚಾಲೆಂಜ್  2018,  30x30 ಅಭಿಯಾನದ ಅಂಗವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ಕೆ ಎಸ್ ಸಿಸಿ ಯ ಉಪಾಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಅಬ್ದುರ್ರಝಕ್ ಅವರು ಅರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾತನಾಡಿದರು. ಬಳಿಕ ಯೋಗ, ಇತ್ಯಾದಿ ವ್ಯಾಯಾಮ ಹಾಗು ಕಬಡ್ಡಿ ಸ್ಪರ್ಧೆ ನಡೆಯಿತು. ಸುಮಾರು 80ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.  ಕಾರ್ಯಕ್ರಮದ ಸಂಚಾಲಕ ಅಬ್ದುಲ್ ಬಶೀರ್  ಸ್ವಾಗತಿಸಿ ನಿರೂಪಿಸಿದರು. ಇನ್ನೋರ್ವ ಸಂಚಾಲಕ ಮುಹಮ್ಮದ್ ಶಫಿ ಉಪಸ್ಥಿತರಿದ್ದರು.

ಈ ಅಭಿಯಾನದ ಇನ್ನೆರಡು ಕಾರ್ಯಕ್ರಮಗಳು ಇದೇ ಸ್ಥಳದಲ್ಲಿ ನ. 16 ಹಾಗು 23ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News