ಕುವೈತ್ ನಲ್ಲಿ ಮುಂದುವರಿದ ಮಳೆ : ರಸ್ತೆ ಸಂಚಾರದಲ್ಲಿ ವ್ಯತ್ಯಯ, ವಿದ್ಯುತ್ ಸ್ಥಗಿತ

Update: 2018-11-10 07:02 GMT

ಕುವೈತ್, ನ. 9: ಕುವೈತ್ ರಾಷ್ಟ್ರದ ಬಹುತೇಕ ಕಡೆಗಳಲ್ಲಿ ಇಂದು ಮತ್ತೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. 

ಎರಡು ದಿನಗಳಿಂದ ಸುರಿದಿದ್ದ ಮಳೆಯು ಇಂದು ಮುಂಜಾನೆ ಸುಮಾರು 3 ಗಂಟೆಗೆ ಮಿಂಚು, ಗುಡುಗು ಸಹಿತ ಮಳೆಯಾಗಿದೆ. ನಂತರ ಸಂಜೆ 4 ಗಂಟೆಯ ಸುಮಾರಿಗೆ ಮಿಂಚು, ಗುಡುಗು ಸಹಿತ ಮಳೆ ಸುರಿದಿದ್ದು, ರಾತ್ರಿಯವರೆಗೂ ಬಿರುಸಿನ ಮಳೆಯಾಗಿದೆ. ಕುವೈತ್ ನ ಸುವೈತ್, ಅಹ್ಮದಿ, ಮಂಗೋಫ್, ಫಾಹಿಲ್ ಮೊದಲಾದ ಕಡೆಗಳಲ್ಲಿ ಮಳೆ ಸುರಿದಿದೆ.

ಮಳೆಯಿಂದಾಗಿ ಬಹುತೇಕ ರಸ್ತೆಗಳು ತುಂಬಿ ಹರಿದಿವೆ. ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಕುವೈತ್ ನ ಕೆಲವೆಡೆಗಳಲ್ಲಿ ಸುಮಾರು ಅರ್ಧ ತಾಸು ವಿದ್ಯುತ್ ಸ್ಥಗಿತಗೊಂಡಿದೆ. ಚಳಿಗಾಲ ಪ್ರಾರಂಭಕ್ಕೂ ಮುನ್ನ ವಾಡಿಕೆಯಂತೆ ಮಳೆಯಾಗುತ್ತಿದ್ದರೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಫೋಟೊ: ಕರಾಣಿ ಅರ್ಫಾದ್ ಜನ್ಸಾಲೆ

Full View

Writer - ಅಬ್ದುಲ್ ಶುಕೂರ್ ಮಲ್ಪೆ

contributor

Editor - ಅಬ್ದುಲ್ ಶುಕೂರ್ ಮಲ್ಪೆ

contributor

Similar News